ವೃತ್ತಿ ಕ್ಷೇತ್ರಕ್ಕೆ ಪೂರಕ ಕೌಶಲ್ಯಗಳ ಕಲಿಕೆ ಅವಶ್ಯಕ

ವೃತ್ತಿ ಕ್ಷೇತ್ರಕ್ಕೆ ಪೂರಕ ಕೌಶಲ್ಯಗಳ ಕಲಿಕೆ ಅವಶ್ಯಕ

ಶಿವಮೊಗ್ಗ | 15 ಜುಲೈ 2025 | ಡಿಜಿ ಮಲೆನಾಡು.ಕಾಂ

ಶೈಕ್ಷಣಿಕ ವೇಳಾಪಟ್ಟಿಗೆ ಸೀಮಿತವಾಗದೆ ವೃತ್ತಿ ಕ್ಷೇತ್ರಕ್ಕೆ ಪೂರಕವಾಗಿರುವ ಇಂಜಿನಿಯರ್‌ ಕೌಶಲ್ಯಗಳನ್ನು ಕಲಿಯಬೇಕು ಎಂದು ಜೆಎನ್‌ಎನ್‌ ಇಂಜಿನಿಯರಿಂಗ್‌ ಕಾಲೇಜಿನ ಪ್ರಾಂಶುಪಾಲ ಡಾ. ವೈ.ವಿಜಯಕುಮಾರ್ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ :   https://whatsapp.com/channel/0029Vaf6LKjHbFV2qoWkPx0G

ನಗರದ ಜೆಎನ್‌ಎನ್‌ ಇಂಜಿನಿಯರಿಂಗ್‌ ಕಾಲೇಜಿನ ಎಂಬಿಎ ಎಂಸಿಎ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಿಇಟಿ, ಕಾಮೆಡ್- ಕೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ ಪ್ರತಿ ವರ್ಷ 13 ಲಕ್ಷ ಇಂಜಿನಿಯರಿಂಗ್ ಸೀಟುಗಳು ಭರ್ತಿಯಾಗುತ್ತಿವೆ.  ಅದರಲ್ಲಿ 3 ಲಕ್ಷ ಜನಕ್ಕೆ ಮಾತ್ರ ಉದ್ಯೋಗವಕಾಶ ಸಿಗುತ್ತದೆ‌.‌ ಕಾಲೇಜಿನ ಪ್ಲೇಸ್ಮೆಂಟ್ ಸಂದರ್ಭದಲ್ಲಿ ಉದ್ಯೋಗ ನೀಡುವ ಸಂಸ್ಥೆಗಳು, ಕೌಶಲ್ಯತೆ ಆಧಾರದಲ್ಲಿ ಉದ್ಯೋಗ ನೀಡುತ್ತವೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಂದಿನ ಕಾರ್ಪೊರೇಟ್ ವಲಯ, ಪದವೀಧರ ಯುವ ಸಮೂಹದಿಂದ ಕೌಶಲ್ಯಾಧಾರಿತ ವ್ಯಕ್ತಿತ್ವ ಬಯಸುತ್ತಿದೆ. ಪೋಷಕರು ಕೇವಲ ಕೋರ್ಸ್ ಗಳ ಮೇಲೆ ಅವಲಂಬಿತರಾಗುತ್ತಿದ್ದಾರೆ. ಎಲ್ಲ ಕೋರ್ಸುಗಳು ತನ್ನದೇ ಆದ ವಿಫುಲ ಅವಕಾಶ ಹೊಂದಿದೆ. ಕೆಲವೇ ಕೋರ್ಸ್ ಗಳಿಂದ ಭವಿಷ್ಯ ಸಾಧ್ಯ ಎಂಬ ಭ್ರಮೆ ಬೇಡ ಎಂದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : digimalenadu@gmail.com

Click on below this picture, Like & Follow Facebook Page ” Digi Malenadu “

ಕಾಲೇಜಿನ ಸಂಶೋಧನಾ ಡೀನ್ ಡಾ. ಎಸ್.ವಿ.ಸತ್ಯನಾರಾಯಣ, ಪ್ರವೇಶಾತಿ ಸಮಿತಿ ಮುಖ್ಯಸ್ಥ ಡಾ. ಸುರೇಂದ್ರ, ರಸಾಯನವಿಜ್ಞಾನ ವಿಭಾಗದ ಮುಖ್ಯಸ್ಥ ಮೋಯಿನುದ್ದಿನ್ ಖಾನ್, ಆಡಳಿತ ವಿಭಾಗದ ಎನ್.ಜಿ.ಸತೀಶ್, ಹೇಮಲತ.ಎನ್.ಎಸ್ ಮತ್ತಿತರರು ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/JqXjFMwXzil6h4ePQU7iyo

ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ  https://whatsapp.com/channel/0029Vaf6LKjHbFV2qoWkPx0G

ಫೇಸ್‌ ಬುಕ್‌ :www.facebook.com/digimalenadu

ನಮ್ಮ ಬಗ್ಗೆ :https://digimalenadu.com/about-us/

ಪ್ರತಿಯೊಬ್ಬರಲ್ಲೂ ಇರಲಿ ಸೇವಾ ಮನೋಭಾವನೆ

digimalenadu

ಶಿವಮೊಗ್ಗ
error: Content is protected !!