ಕುವೆಂಪು ವಿಶ್ವವಿದ್ಯಾಲಯಕ್ಕೆ ನ್ಯಾಕ್ ನಿಂದ ಎ ಗ್ರೇಡ್ ಮಾನ್ಯತೆ
ಶಿವಮೊಗ್ಗ | 15 ಜುಲೈ 2025 | ಡಿಜಿ ಮಲೆನಾಡು.ಕಾಂ
ಕುವೆಂಪು ವಿಶ್ವವಿದ್ಯಾಲಯಕ್ಕೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ(NAAC) ಎ ಗ್ರೇಡ್ ಮಾನ್ಯತೆ ನೀಡಿದೆ.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ : https://whatsapp.com/channel/0029Vaf6LKjHbFV2qoWkPx0G
2018ರ ಅಕ್ಟೋಬರ್ ತಿಂಗಳಿನಿಂದ 2024ರ ಸೆಪ್ಟೆಂಬರ್ ವರೆಗಿನ ಮೌಲ್ಯಮಾಪನ ಅವಧಿಯಲ್ಲಿ ವಿಶ್ವವಿದ್ಯಾಲಯದಲ್ಲಿ ನಡೆದ ಶೈಕ್ಷಣಿಕ ಕಾರ್ಯಕ್ರಮಗಳು, ವಿದ್ಯಾರ್ಥಿ ಕೇಂದ್ರಿತ ಸುಧಾರಣೆಗಳು, ಮತ್ತು ಮೂಲಸೌಕರ್ಯಗಳಲ್ಲಿನ ಸುಧಾರಣೆಗಳನ್ನು ನ್ಯಾಕ್ ತಂಡ ಜೂನ್ ತಿಂಗಳಲ್ಲಿ ಪರಿಶೀಲನೆ ನಡೆಸಿತ್ತು.
ಇದೀಗ ನ್ಯಾಕ್ ಸಂಸ್ಥೆ ಫಲಿತಾಂಶವನ್ನು ವಿಶ್ವವಿದ್ಯಾಲಯದೊಂದಿಗೆ ಹಂಚಿಕೊಂಡಿದ್ದು, 3.11 ಸಿಜಿಪಿಎ ಅಂಕಗಳೊಂದಿಗೆ ಕುವೆಂಪು ವಿವಿ ಎ ಶ್ರೇಣಿಯ ಮಾನ್ಯತೆ ಉಳಿಸಿಕೊಂಡಿದೆ. ಕಳೆದ ಮೌಲ್ಯಮಾಪನ ಅವಧಿಯಲ್ಲಿ 3.05 ಸಿಜಿಪಿಎನೊಂದಿಗೆ ಎ ಶ್ರೇಣಿ ಪಡೆದಿದ್ದ ವಿವಿ, ಈ ಬಾರಿ ಅಂಕ ಹೆಚ್ಚಿಸಿಕೊಂಡಿದ್ದು, 3.11 ಸಿಜಿಪಿಎ ಪಡೆಯುವುದರ ಮೂಲಕ ಎ ಶ್ರೇಣಿ ಗರಿ ಮುಡಿಗೇರಿಸಿಕೊಂಡಿದೆ.
ಡಿಜಿಮಲೆನಾಡು.ಕಾಂ | ಇ-ಮೇಲ್ : digimalenadu@gmail.com
Like & Follow Facebook Page ” Digi Malenadu “
ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಪ್ರತಿಕ್ರಿಯಿಸಿ, ಮೌಲ್ಯಮಾಪನದ ಅವಧಿಯಲ್ಲಿ ಕೋವಿಡ್-19ನಂತಹ ಮಹಾಮಾರಿ ಇದ್ದರೂ, ಅಧ್ಯಾಪಕರ ಸಂಶೋಧನಾ ಚಟುವಟಿಕೆಗಳು, ನಿರಂತರವಾಗಿ ಮುಂದುವರೆದ ಪಾಠ ಪ್ರವಚನ, ಅಧ್ಯಾಪಕೇತರ ನೌಕರರ ಸಂಪೂರ್ಣ ಬೆಂಬಲ ಮತ್ತು ಆಂತರಿಕ ಗುಣಮಟ್ಟ ಮತ್ತು ಮೌಲ್ಯಮಾಪನ ಘಟಕದ ಶ್ರಮದಿಂದ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/JqXjFMwXzil6h4ePQU7iyo
ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ https://whatsapp.com/channel/0029Vaf6LKjHbFV2qoWkPx0G
ಫೇಸ್ ಬುಕ್ :www.facebook.com/digimalenadu
ನಮ್ಮ ಬಗ್ಗೆ :https://digimalenadu.com/about-us/
