ಸಂಸ್ಥೆಗಳ ಬೆಳವಣಿಗೆಯಲ್ಲಿ ಹಿರಿಯರ ಶ್ರಮ ಅಪಾರ

ಸಂಸ್ಥೆಗಳ ಬೆಳವಣಿಗೆಯಲ್ಲಿ ಹಿರಿಯರ ಶ್ರಮ ಅಪಾರ

ಶಿವಮೊಗ್ಗ | 15 ಜುಲೈ 2025 | ಡಿಜಿ ಮಲೆನಾಡು.ಕಾಂ

ಸಂಘ ಸಂಸ್ಥೆಗಳ ಬೆಳವಣಿಗೆಯಲ್ಲಿ ಹಿರಿಯ ಸದಸ್ಯರ ಶ್ರಮ ಅಪಾರವಾಗಿರುತ್ತದೆ. ಸಂಸ್ಥೆಗಳ ಪ್ರಗತಿಗೆ ಶ್ರಮಿಸಿದ ಹಿರಿಯರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಯೂತ್ ಹಾಸ್ಟೆಲ್ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಸತೀಶ್ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ :   https://whatsapp.com/channel/0029Vaf6LKjHbFV2qoWkPx0G

ಮಥುರಾ ಪ್ಯಾರಾಡೈಸ್‌ನಲ್ಲಿ ಯೂತ್ ಹಾಸ್ಟೆಲ್ ಆಫ್ ಇಂಡಿಯಾದ ತರುಣೋದಯ ಘಟಕದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, 35 ವರ್ಷದ ಹಿಂದೆ ಪ್ರಾರಂಭವಾದ ಸಂಸ್ಥೆಯ ಹಿರಿಯ ಸದಸ್ಯರನ್ನು ಗೌರವಿಸುತ್ತಿರುವುದು ಉತ್ತಮ ಕಾರ್ಯ. ಅವರ ಪರಿಶ್ರಮದಿಂದ ಈ ಘಟಕ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿದೆ. ಮುಂದಿನ ಪೀಳಿಗೆಗೆ, ಹಿಂದಿನ ಸಂಘಟಕರ ವಿಷಯವನ್ನು ತಿಳಿಸುವುದು ನಾವು ತಪ್ಪದೇ ಮಾಡಬೇಕಾದ ವಿಷಯ ಎಂದು ತಿಳಿಸಿದರು.

ಕಾರ್ಯಾಧ್ಯಕ್ಷ ವಾಗೇಶ್ ಮಾತನಾಡಿ, ಕೆಲ ವರ್ಷದಿಂದ ಹಿರಿಯ ಸದಸ್ಯರನ್ನು ಸನ್ಮಾನಿಸಿ, ಅವರಿಗೆ ಗೌರವ ಸಮರ್ಪಿಸುತ್ತಿದ್ದೇವೆ ಎಂದು ಹೇಳಿದರು. ಯೂತ್ ಹಾಸ್ಟೆಲ್ ರಾಷ್ಟ್ರೀಯ ಮಾಜಿ ಉಪಾಧ್ಯಕ್ಷ ಅ.ನಾ.ವಿಜಯೇಂದ್ರರಾವ್ ಅವರು ಯೂತ್ ಹಾಸ್ಟೆಲ್ ನಡೆದು ಬಂದ ದಾರಿ, ಚಾರಣದಿಂದ ಆಗುವ ಅನುಭವಗಳು ಮತ್ತು ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ದೇಶ ವಿದೇಶಗಳ ಚಾರಣಿಗರ ಸಂಪರ್ಕ ಸಿಗುತ್ತದೆ. ತರುಣೋದಯ ಘಟಕ ಚಾರಣದ ಜತೆಗೆ ಪ್ರತಿ ವರ್ಷ 200ಕ್ಕೂ ಹೆಚ್ಚು ಜನರನ್ನು ಹಿಮಾಲಯ ಚಾರಣಕ್ಕೆ ಕಳಿಸುತ್ತಿದೆ. ಸದಸ್ಯತ್ವದಲ್ಲಿ ರಾಜ್ಯ ಮಟ್ಟದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : digimalenadu@gmail.com

Like & Follow Facebook Page ” Digi Malenadu “

ಯೂತ್ ಹಾಸ್ಟೆಲ್ ತರುಣೋದಯ ಘಟಕದ ಗೌರವಾಧ್ಯಕ ಎನ್.ಗೋಪಿನಾಥ್ ಮಾತನಾಡಿ, ಮಲೆನಾಡು ಹಬ್ಬ ಎಂಬ ಹೊಸ ಕಾರ್ಯಕ್ರಮವನ್ನು ಸ್ವಾತಂತ್ರ‍್ಯ ಉದ್ಯಾನವನದಲ್ಲಿ ಎರಡನೂರು ಮಳಿಗೆಗಳನ್ನು ಹಾಕಿ ಆಯೋಜಿಸಲಾಗುವುದು. ಎಲ್ಲರ ಸಹಕಾರ ಅವಶ್ಯಕತೆ ಇದ್ದು, ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ತಿಳಿಸಿದರು. ಯೂತ್ ಹಾಸ್ಟೆಲ್ ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ, ಸುಮಾರಾಣಿ, ಮಮತಾ, ಸುರೇಶ್ ಇತರರು ಹಾಜರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/JqXjFMwXzil6h4ePQU7iyo

ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ  https://whatsapp.com/channel/0029Vaf6LKjHbFV2qoWkPx0G

ಫೇಸ್‌ ಬುಕ್‌ :www.facebook.com/digimalenadu

ನಮ್ಮ ಬಗ್ಗೆ :https://digimalenadu.com/about-us/

ಕುವೆಂಪು ವಿಶ್ವವಿದ್ಯಾಲಯಕ್ಕೆ ನ್ಯಾಕ್ ನಿಂದ ಎ ಗ್ರೇಡ್ ಮಾನ್ಯತೆ

digimalenadu

ಶಿವಮೊಗ್ಗ
error: Content is protected !!