ಶ್ರೀಗಂಧದ ಗೊಂಬೆಗೆ ಬಿರುದು ಸನ್ಮಾನ, ನಟಿ ಪ್ರೇಮಾಗೆ ಬೆಳ್ಳಿಹಬ್ಬದ ಸಂಭ್ರಮ, ಫೆ. 19ರ ಕಾರ್ಯಕ್ರಮದ ಉಚಿತ ಪಾಸ್‌ಗಳಿಗೆ ಸಂಪರ್ಕಿಸಿ

ಶ್ರೀಗಂಧದ ಗೊಂಬೆಗೆ ಬಿರುದು ಸನ್ಮಾನ, ನಟಿ ಪ್ರೇಮಾಗೆ ಬೆಳ್ಳಿಹಬ್ಬದ ಸಂಭ್ರಮ, ಫೆ. 19ರ ಕಾರ್ಯಕ್ರಮದ ಉಚಿತ ಪಾಸ್‌ಗಳಿಗೆ ಸಂಪರ್ಕಿಸಿ

ಶಿವಮೊಗ್ಗ | 14 ಫೆಬ್ರವರಿ 2023 | ಡಿಜಿ ಮಲೆನಾಡು.ಕಾಂ

ನಟಿ ಪ್ರೇಮಾ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷ ಪೂರೈಸಿ ಬೆಳ್ಳಿ ಹಬ್ಬ ಸಂಭ್ರಮದಲ್ಲಿರುವ ಪ್ರಯುಕ್ತ ಸಮನ್ವಯ ಟ್ರಸ್ಟ್ ವತಿಯಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಫೆಬ್ರವರಿ 19ರ ಸಂಜೆ 6ಕ್ಕೆ “ಶ್ರೀಗಂಧದ ಗೊಂಬೆಗೆ ಬಿರುದು ಸನ್ಮಾನ” ಕಾರ್ಯಕ್ರಮ ಆಯೋಜಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/shivamogganews ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ನಾಯಕ ನಟರು 25 ವರ್ಷ ಪೂರೈಸಿ ಚಲನಚಿತ್ರರಂಗದಲ್ಲಿ ಯಶಸ್ವಿಯಾಗುವುದು ಸಾಮಾನ್ಯ. ಆದರೆ ನಾಯಕ ನಟಿಯರು 25 ವರ್ಷ ಪೂರ್ಣಗೊಳಿಸುವುದು ಕಷ್ಟದ ಮಾತು. ನಟಿ ಪ್ರೇಮಾ ಅವರು ಚಿತ್ರರಂಗದಲ್ಲಿ 25 ವರ್ಷ ಪೂರೈಸಿ ಪ್ರಸ್ತುತ ಕೂಡ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಉತ್ತಮ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಸವ್ಯಸಾಚಿ ಸಿನಿಮಾ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರೇಮಾ, ಓಂ ಚಿತ್ರದ ಮೂಲಕ ಪ್ರಖ್ಯಾತರಾದರು. ಶಿವರಾಜ್‌ಕುಮಾರ್, ವಿಷ್ಣುವರ್ಧನ್, ಉಪೇಂದ್ರ, ರವಿಚಂದ್ರನ್, ಸಾಯಿಕುಮಾರ್, ರಮೇಶ್ ಜತೆಯಲ್ಲಿ ಬಹುತೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಅತ್ಯಂತ ಅಪರೂಪ ಹಾಗೂ ವಿಶೇಷವಾದ ಕಾರ್ಯಕ್ರಮ ಶಿವಮೊಗ್ಗದಲ್ಲಿ ಆಯೋಜನೆ ಆಗುತ್ತಿದೆ. 25 ವರ್ಷ ಪೂರೈಸಿ ಸಕ್ರಿಯರಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ನಟಿ ಪ್ರೇಮಾ ಅವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಇದಾಗಿದೆ. ಸಿನಿಮಾ ರಂಗದ ಹಿರಿಯ ನಿರ್ದೇಶಕರು, ನಟರು, ಕಲಾವಿದರು, ಗಣ್ಯರು ಪಾಲ್ಗೊಳ್ಳುವರು. ಕುವೆಂಪು ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದ ಉಚಿತ ಪಾಸ್‌ಗಳನ್ನು ಪಡೆದುಕೊಳ್ಳುವಂತೆ ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಚಿತ ಪಾಸ್ ಗಳಿಗೆ ಸಂಪರ್ಕಿಸಿ: ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಫೆಬ್ರವರಿ 19ರ ಸಂಜೆ 6ಕ್ಕೆ ಆಯೋಜಿಸಿರುವ “ಶ್ರೀಗಂಧದ ಗೊಂಬೆಗೆ ಬಿರುದು ಸನ್ಮಾನ” ಕಾರ್ಯಕ್ರಮಕ್ಕೆ ಪಾಸ್ ಕಡ್ಡಾಯವಾಗಿದೆ. ಉಚಿತ ಪಾಸ್‌ಗಳನ್ನು ಪಡೆಯಲು ಇಚ್ಚಿಸುವ ಆಸಕ್ತರು ಮೊಬೈಲ್ ಸಂಖ್ಯೆ 9380233123 ಸಂಪರ್ಕಿಸಬಹುದಾಗಿದೆ.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/shivamogganews

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

digimalenadu

ಶಿವಮೊಗ್ಗ
error: Content is protected !!