ಅನಾವರಣಗೊಂಡ ವೈವಿಧ್ಯ ಯೋಚನೆ, ಪ್ರಾತ್ಯಕ್ಷಿಕೆ ಪ್ರದರ್ಶನ

ಅನಾವರಣಗೊಂಡ ವೈವಿಧ್ಯ ಯೋಚನೆ, ಪ್ರಾತ್ಯಕ್ಷಿಕೆ ಪ್ರದರ್ಶನ

ಶಿವಮೊಗ್ಗ | 3 ಆಗಸ್ಟ್‌ 2025 | ಡಿಜಿ ಮಲೆನಾಡು.ಕಾಂ

ಪೆಟ್ರೋಲ್ ಬೆಲೆ ಏರಿಕೆಯಲ್ಲಿ ತತ್ತರಿಸಿದ್ದ ಬೈಕ್‌ ಸವಾರರಿಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರಿನಿಂದಲೆ ಓಡುವಂತಹ ದ್ವಿಚಕ್ರ ವಾಹನದ ಇಂಜಿನ್ ರೂಪಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ :   https://whatsapp.com/channel/0029Vaf6LKjHbFV2qoWkPx0G

ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಿಂದ ನಗರದ ಜೆಎನ್‌ಎನ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಎರಡು ದಿನ ಏರ್ಪಡಿಸಿದ್ದ 48ನೇ ರಾಜ್ಯ ಮಟ್ಟದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪೋಸ್ಟರ್ ಪ್ರಸ್ತುತಿ ಮತ್ತು ನಾವೀನ್ಯ ಯೋಜನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮದಲ್ಲಿ ನೀರಿನ ಮೂಲಕ ಓಡುವ ದ್ವಿಚಕ್ರ ವಾಹನ ನೋಡುಗರ ಗಮನ ಸೆಳೆಯಿತು.

ಬೆಂಗಳೂರಿನ ಆರ್.ವಿ. ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಹಮೀದ್, ಆಕಾಶ್, ಕಿರಣ್, ಓಂಪ್ರಕಾಶ್ ತಂಡ ನಿರ್ಮಿಸಿರುವ ಹೈಡ್ರೋಜನ್ ಕಂಬಷನ್ ಇಂಜಿನ್ ನಲ್ಲಿ ನೀರನ್ನು ಎಸ್.ಎಸ್ 304 ಪ್ಲೇಟ್ಸ್  ಮತ್ತು ಕೆಓಹೆಚ್ ಸೊಲ್ಯುಷನ್ ಬಳಸಿ ಹೈಡ್ರೋಜನ್ ಅಂಶವಾಗಿ ಶೇಖರಿಸಲಾಗುತ್ತದೆ. ನಂತರ ಪಲ್ಸ್ ವಿಡ್ತ್ ಮಾಡ್ಯುಲೇಷನ್ (ಪಿಡಬ್ಲ್ಯೂಎಂ) ವಿದ್ಯುತ್ ಸರಾಸರಿ ಪ್ರವಾಹವನ್ನು ನಿಯಂತ್ರಿಸಿ ದ್ವಿಚಕ್ರ ವಾಹನ ಮುಂದುವರಿಯುವಂತೆ ಮಾಡುತ್ತದೆ. 3 ರಿಂದ 4 ಲೀಟರ್ ನೀರಿಗೆ 60 ಕಿಮಿ ದೂರ ಚಲಿಸಲಿದೆ ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದರು.

ಬೆಂಗಳೂರಿನ ಗೀತಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದ ಇಲೆಕ್ಟ್ರಿಕ್ ಆಧಾರಿತ ತಳ್ಳುಗಾಡಿ, ಜೈನ್ ಕಾಲೇಜಿನ ವಿದ್ಯಾರ್ಥಿಗಳು ರೂಪಿಸಿದ್ದ ವಿದ್ಯುತ್ ಉತ್ಪಾದನೆಗಾಗಿ ಹೆಲಿಕಲ್ ಆರ್ಕಿಮಿಡೀಸ್ ವಿಂಡ್ ಟರ್ಬೈನ್ ಜನರೇಟನ್, ಇಂಡಿಯನ್ ಅಕಾಡೆಮಿ ಪದವಿ ಕಾಲೇಜು ರೂಪಿಸಿದ್ದ ಗಿಡಮೂಲಿಕೆ ಮೂಲಕ ಸೊಳ್ಳೆಗಳನ್ನು ಓಡಿಸುವ ಧೂಪದ್ರವ್ಯ, ರೇವಾ ವಿವಿ ವಿದ್ಯಾರ್ಥಿಗಳು ರೂಪಿಸಿದ್ದ ಅಗ್ನಿ ಪತ್ತೆ ಮತ್ತು ನಿಗ್ರಹಕ್ಕಾಗಿ ಅನುಕೂಲವಾಗುವ ಸ್ವಾಯತ್ತ ಡ್ರೋನ್, ನಿಟ್ಟೆ ಮಿನಾಕ್ಷಿ ಕಾಲೇಜಿನ ವಿದ್ಯಾರ್ಥಿಗಳ ಸ್ಥಿರವಾದ ರೆಕ್ಕೆಗಳನ್ನು ಹೊಂದಿದ ಡ್ರೋನ್ ವೈಮಾನಿಕ ವಾಹನ, ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ನಿರ್ಮಿಸಿದ್ದ ಜೋಳದ ಹೊಟ್ಟಿನಲ್ಲಿ ಕಪ್ ತಯಾರಿಸಬಲ್ಲ ಯಂತ್ರ ಸೇರಿದಂತೆ 400ಕ್ಕೂ ಹೆಚ್ಚು ಯೋಜನೆಗಳು ನೋಡುಗರ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿತ್ತು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : digimalenadu@gmail.com

Like & Follow Facebook Page ” Digi Malenadu “

ರಾಜ್ಯದ ವಿವಿಧ ಇಂಜಿನಿಯರಿಂಗ್ ಕಾಲೇಜಿನಿಂದ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು, ನಾವೀನ್ಯ ಯೋಜನೆಗಳ ಪ್ರಾತ್ಯಕ್ಷಿಕೆ ಜತೆಗೆ ಉತ್ಸುಕತೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/JqXjFMwXzil6h4ePQU7iyo

ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ  https://whatsapp.com/channel/0029Vaf6LKjHbFV2qoWkPx0G

ಫೇಸ್‌ ಬುಕ್‌ :www.facebook.com/digimalenadu

ನಮ್ಮ ಬಗ್ಗೆ :https://digimalenadu.com/about-us/

ಉತ್ತಮ ಸೇವೆ ಸಲ್ಲಿಸಿದ ಸಾರ್ಥಕ ಭಾವ

digimalenadu

ಶಿವಮೊಗ್ಗ
error: Content is protected !!