ಶಿಕ್ಷಕ ವರ್ಗದ ಮೇಲಿದೆ ಹೆಚ್ಚಿದೆ ಜವಾಬ್ದಾರಿ
ಶಿವಮೊಗ್ಗ | 7 ಆಗಸ್ಟ್ 2025 | ಡಿಜಿ ಮಲೆನಾಡು.ಕಾಂ
ಆಧುನಿಕತೆ ಭರಾಟೆಗೆ ಸಿಲುಕಿ ಹದಿಹರೆಯದ ಮನಸ್ಸು ಸಂಪೂರ್ಣ ಕಲುಷಿತಗೊಳ್ಳುತ್ತಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ : https://whatsapp.com/channel/0029Vaf6LKjHbFV2qoWkPx0G
ನಗರದ ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನಿಂದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಕಾಲೇಜಿನ ವಿದ್ಯಾರ್ಥಿನಿ ಸಂಘ, ಕ್ರೀಡಾ ವೇದಿಕೆ, ಎನ್.ಎಸ್.ಎಸ್ ಘಟಕಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವುದೇ ರಂಗದಲ್ಲಿ ಮುಕ್ತವಾಗಿ ತೊಡಗಿಸಿಕೊಳ್ಳದವರು, ಇನ್ನೊಬ್ಬರಿಗೆ ಎಂದಿಗೂ ಕಲಿಸಲಾರರು. ಭವಿಷ್ಯದ ಜನಾಂಗವನ್ನು ಮುನ್ನಡೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು.
ವಿವೇಚನೆ ಇಲ್ಲದ ವಯಸ್ಸಿನಲ್ಲಿ, ಮೊಬೈಲ್ ಯುವ ಮನಸ್ಸನ್ನು ಹಾದಿ ತಪ್ಪಿಸುತ್ತಿದೆ. ಕುಟುಂಬ ಪದ್ಧತಿಯಿಂದ ವಿಮುಕರಾಗಿದ್ದೇವೆ. ವಿಫುಲ ಅವಕಾಶಗಳನ್ನು ಬೆನ್ನತ್ತಿ ಹೋಗುವಾಗ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ತುಂಬು ಕುಟುಂಬದ ಜೀವನ ಎಂಬ ಕಲ್ಪನೆಯಿಂದ ಹೊರಬಂದು, ಗಂಡ ಹೆಂಡತಿ ಹೊಂದಾಣಿಕೆಯೆ ಕುಟುಂಬ ಎಂಬ ದುಸ್ಥಿತಿಗೆ ಇಂದಿನ ಸಮಾಜ ಬಂದಿದೆ ಎಂದರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಸತತ ಅಭ್ಯಾಸದಿಂದ ಮಾತ್ರ ಯಾವುದೇ ವಿಷಯದಲ್ಲಿ ವಿದ್ವತ್ ಪಡೆಯಲು ಸಾಧ್ಯ. ಕಂಠಪಾಠದ ಕಲಿಕೆಗಿಂತ, ವಿಷಯಗಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿ. ವಿದ್ಯಾರ್ಥಿ ಸಂಘಗಳು ನಮ್ಮಲ್ಲಿ ಸಹಬಾಳ್ವೆಯ ಮಹತ್ವ ತಿಳಿಸುತ್ತದೆ. ಜೀವನಕ್ಕೆ ಬೇಕಾದ ಎಲ್ಲಾ ಕೌಶಲ್ಯತೆಗಳನ್ನು ಕಾಲೇಜಿನ ವೇದಿಕೆಗಳು, ಅನುಭವದ ಆಧಾರದಲ್ಲಿ ಕಲಿಸುತ್ತದೆ. ಶ್ರದ್ಧೆ ಸಾಧನೆಯ ಶ್ರೇಷ್ಟವಾದ ದಾರಿ ಎಂದು ಹೇಳಿದರು.
ಸುಬ್ಬಯ್ಯ ಸಮೂಹ ಸಂಸ್ಥೆ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿನಯಾ ಶ್ರೀನಿವಾಸ ಮಾತನಾಡಿ, ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಪ್ರಾಮಾಣಿಕತೆ ಮತ್ತು ಜ್ಞಾನ ನಿಮ್ಮಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ ಎಂದು ಸಲಹೆ ನೀಡಿದರು.
ಡಿಜಿಮಲೆನಾಡು.ಕಾಂ | ಇ-ಮೇಲ್ : digimalenadu@gmail.com
Like & Follow Facebook Page ” Digi Malenadu “
ಕಾಲೇಜಿನ ಪ್ರಾಂಶುಪಾಲ ಎಸ್.ಆರ್.ವೆಂಕಟೇಶ್, ಉಪಪ್ರಾಂಶುಪಾಲ ಸಿ.ತಿಪ್ಪೇಸ್ವಾಮಿ, ವಿದ್ಯಾರ್ಥಿನಿ ಸಂಘದ ಅಧ್ಯಕ್ಷೆ ಅನನ್ಯ, ಕಾರ್ಯದರ್ಶಿ ನಂದಿತ ಉಪಸ್ಥಿತರಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/JqXjFMwXzil6h4ePQU7iyo
ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ https://whatsapp.com/channel/0029Vaf6LKjHbFV2qoWkPx0G
ಫೇಸ್ ಬುಕ್ :www.facebook.com/digimalenadu
ನಮ್ಮ ಬಗ್ಗೆ :https://digimalenadu.com/about-us/
