ರಕ್ತದ ಮಹತ್ವ ಅರಿತುಕೊಳ್ಳುವುದು ಅವಶ್ಯ

ರಕ್ತದ ಮಹತ್ವ ಅರಿತುಕೊಳ್ಳುವುದು ಅವಶ್ಯ

ಶಿವಮೊಗ್ಗ | 7 ಆಗಸ್ಟ್‌ 2025 | ಡಿಜಿ ಮಲೆನಾಡು.ಕಾಂ

ತುರ್ತು ಸಂದರ್ಭಗಳಲ್ಲಿ ರಕ್ತದಾನ ಮಾಡುವುದು ಅವಶ್ಯಕ. ಇದಕ್ಕಾಗಿ ರಕ್ತದ ಗುಂಪಿನ ಅರಿವು ಇರಬೇಕು. ರಕ್ತದ ವರ್ಗೀಕರಣ ತಿಳಿದುಕೊಳ್ಳಬೇಕು ಎಂದು ರೋಟರಿ ಶಿವಮೊಗ್ಗ ಪೂರ್ವ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಕೆ.ಬಿ.ರವಿಶಂಕರ್ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ :   https://whatsapp.com/channel/0029Vaf6LKjHbFV2qoWkPx0G

ರೋಟರಿ ಶಿವಮೊಗ್ಗ ಪೂರ್ವ ಹಾಗೂ ರೋಟರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರೋಟರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾ ಶಾಖೆ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದ ಗುಂಪು ತಪಾಸಣೆ ಹಾಗೂ ಮಾಹಿತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪ್ರತಿಯೊಬ್ಬರು ರಕ್ತದ ಗುಂಪು ಪರೀಕ್ಷಿಸಿಕೊಂಡು ದಾಖಲೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

ರಾಜ್ಯ ಸರ್ಕಾರಿ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷೆ ಮಂಜುಳಾ ಮಾತನಾಡಿ, ವಿದ್ಯಾರ್ಥಿಗಳು ರಕ್ತದ ಗುಂಪನ್ನು ಸಕಾಲದಲ್ಲಿ ಪರೀಕ್ಷೆ ಮಾಡಿಸಿಕೊಳ್ಳದೆ ಏನಾದರೂ ಅವಘಡ  ಸಂಭವಿಸಿದಾಗ ಪರೀಕ್ಷೆಗೆ ಒಳಗಾಗುವುದು ಸರಿಯಲ್ಲ. ರಕ್ತದ ಮಾಹಿತಿ ಹೊಂದಿರಬೇಕು ಎಂದರು.

ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ಕಾರ್ಯದರ್ಶಿ ಡಾ. ಧನಂಜಯ ರಾಂಪುರ ಮಾತನಾಡಿ, ರಕ್ತದ ಅವಶ್ಯಕತೆ ಹಾಗೂ ಮಹತ್ವದ ಕುರಿತು ಅರಿವು ಹೊಂದಿರುವುದು ಅವಶ್ಯ ಎಂದು ತಿಳಿಸಿದರು. 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಕ್ತದ ಗುಂಪು ಪರೀಕ್ಷಿಸಿ ಗುರುತಿನ ಪತ್ರ ನೀಡಲಾಯಿತು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : digimalenadu@gmail.com

Like & Follow Facebook Page ” Digi Malenadu “

ರಾಮಚಂದ್ರ ಎಸ್.ಸಿ., ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳ ಸಂಘದ ಕಾರ್ಯದರ್ಶಿ ಶರ್ಮಿಳಾ, ಖಜಾಂಚಿ ಲತಾ ಡಿ.ಟಿ, ಹಿರಿಯ ಉಪಾಧ್ಯಕ್ಷ ನರಸಿಂಹ .ಕೆ, ಸದಸ್ಯರಾದ ರಾಘವೇಂದ್ರ ಟಿ.ಜಿ, ರಾಘವೇಂದ್ರ ಕೆ., ಉಮೇಶ, ರಮೇಶ್, ಗಿರೀಶ್, ವೆಂಕಟೇಶ್ ಪ್ರಸಾದ್ ಇತರರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/JqXjFMwXzil6h4ePQU7iyo

ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ  https://whatsapp.com/channel/0029Vaf6LKjHbFV2qoWkPx0G

ಫೇಸ್‌ ಬುಕ್‌ :www.facebook.com/digimalenadu

ನಮ್ಮ ಬಗ್ಗೆ :https://digimalenadu.com/about-us/

ಶಿಕ್ಷಕ ವರ್ಗದ ಮೇಲಿದೆ ಹೆಚ್ಚಿದೆ ಜವಾಬ್ದಾರಿ

digimalenadu

ಶಿವಮೊಗ್ಗ
error: Content is protected !!