ನಿಸ್ವಾರ್ಥ ಸೇವೆಯು ಆತ್ಮತೃಪ್ತಿಯ ಮಾರ್ಗ – ಡಾ. ಧನಂಜಯ ಸರ್ಜಿ

ನಿಸ್ವಾರ್ಥ ಸೇವೆಯು ಆತ್ಮತೃಪ್ತಿಯ ಮಾರ್ಗ – ಡಾ. ಧನಂಜಯ ಸರ್ಜಿ

ಶಿವಮೊಗ್ಗ | 18 ಸೆಪ್ಟೆಂಬರ್‌ 2022 | ಡಿಜಿ ಮಲೆನಾಡು.ಕಾಂ

ಸಮಾಜದ ಪ್ರತಿಯೊಬ್ಬರು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ನಿಸ್ವಾರ್ಥ ಸೇವೆಯು ಆತ್ಮ ತೃಪ್ತಿಯನ್ನು ಒದಗಿಸುವ ಮಾರ್ಗ ಆಗಿದೆ ಎಂದು ಸರ್ಜಿ ಸಮೂಹ ಸಂಸ್ಥೆಯ ಡಾ. ಧನಂಜಯ ಸರ್ಜಿ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ 14ರ ಸಂಭ್ರಮದ “ಸಹ್ಯಾದ್ರಿ ಉತ್ಸವ” ಹಾಗೂ ಜೆಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಜೆಸಿಐನಂತಹ ಸಂಸ್ಥೆಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವ ವಿಕಸನ ಆಗುವುದರ ಜತೆಯಲ್ಲಿ ಆತ್ಮಸ್ಥೈರ್ಯ ವೃದ್ಧಿಸುತ್ತದೆ. ಸೇವಾ ಮನೋಭಾವ ಬೆಳೆಯುತ್ತದೆ. ಕಷ್ಟ ಬಂದಾಗ ಹೆದರದೇ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ ಧೈರ್ಯದಿಂದ ಮುನ್ನಡೆಯಲು ಸಾಧ್ಯ ಆಗುತ್ತದೆ ಎಂದು ತಿಳಿಸಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿಕ್ಕಮಗಳೂರಿನ ಕಾಫಿನಾಡು ಚಂದು, ಜೀವನದಲ್ಲಿ ಏನೇ ಕಷ್ಟ ಬಂದರೂ ಛಲದಿಂದ ಬದುಕುವ ಮನೋಭಾವ ಬೆಳೆಸಿಕೊಳ್ಳಬೇಕು. ಅವಮಾನ, ನೋವು ಎದುರಾದರೂ ಮುಂದೆ ಗೆಲುವು ಸಿಕ್ಕೇ ಸಿಗುತ್ತದೆ. ಶ್ರಮ ವಹಿಸಿ ಬದುಕಿದರೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.

ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಸತೀಶ್‌ಚಂದ್ರ ಮಾತನಾಡಿ, ವಿದ್ಯಾವಂತ ಯುವ ಸಮುದಾಯ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು. ಸಾರ್ವಜನಿಕ ಸೇವೆ ಸಲ್ಲಿಸಲು ಅವಕಾಶ ಇರುವ ರಾಜಕೀಯ ಕ್ಷೇತ್ರಕ್ಕೆ ವಿದ್ಯಾವಂತ ಯುವ ಸಮುದಾಯ ಬರಬೇಕು ಎಂದು ಹೇಳಿದರು.

ಸೆಪ್ಟೆಂಬರ್ ತಿಂಗಳಲ್ಲಿ ಜೆಸಿಐ ಸಂಸ್ಥೆ ವತಿಯಿಂದ ಸಪ್ತಾಹ ಕಾರ್ಯಕ್ರಮ ಮುಖಾಂತರ ಸೇವಾ ಕಾರ್ಯಗಳನ್ನು ನಡೆಸಲಾಗುತ್ತದೆ. ಸಪ್ತಾಹದಲ್ಲಿ ಅನ್ನದಾನ, ರಕ್ತದಾನ, ಶಾಲೆ ದತ್ತು, ಪರಿಸರ ಜಾಗೃತಿ, ಕಾನೂನು ಅರಿವು ಕಾರ್ಯಾಗಾರ ಸೇರಿ ವಿವಿಧ ರೀತಿಯಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಲಾಗಿದೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪವಿತ್ರಕುಮಾರ, ಕಿಶೋರ್‌ಕುಮಾರ್, ಪ್ರಕಾಶ್ ಬೈಂದೂರ್, ಕಿರಣ್.ಕೆ. ಅವರಿಗೆ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಯೂರಿ ನೃತ್ಯ ಕಲಾ ಕೇಂದ್ರ ವಿದುಷಿ ಶ್ವೇತಾ ಪ್ರಕಾಶ್ ಅವರಿಂದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಯಿತು.

ವಲಯ ನಿರ್ದೇಶಕ ಅನೂಶ್ ಗೌಡ, ಜೆಸಿ ವೀಕ್ ಕೋಆರ್ಡಿನೇಟರ್ ಚಂದ್ರಹಾಸ ಶೆಟ್ಟಿ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥಾಪಕ ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಸಂತೋಷ್‌ಕುಮಾರ್.ಬಿ.ಎನ್., ಕಾರ್ಯಕ್ರಮ ನಿರ್ದೇಶಕಿ ಡಾ. ಅಖಿಲಾ ಡಿ. ಉಪಸ್ಥಿತರಿದ್ದರು.

ಜೆಸಿಐ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ ನಡೆದ 14ರ ಸಂಭ್ರಮದ “ಸಹ್ಯಾದ್ರಿ ಉತ್ಸವ” ಸಮಾರಂಭದಲ್ಲಿ ಕಾಫಿನಾಡು ಚಂದು ಅವರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ಜನ್ಮದಿನ ಆಚರಿಸಿಕೊಂಡಿರುವ ಸರ್ಜಿ ಸಮೂಹ ಸಂಸ್ಥೆಯ ಡಾ. ಧನಂಜಯ ಸರ್ಜಿ ಅವರಿಗೆ ಕಾಫಿ ನಾಡು ಚಂದು ಅವರು ತಮ್ಮದೇ ಸ್ಟೈಲ್‌ನಲ್ಲಿ ಜನ್ಮದಿನದ ಶುಭಾಶಯ ಕೋರಿದರು. ಸಾಮಾಜಿಕ ಜಾಲತಾಣದಲ್ಲಿ ಪ್ರಖ್ಯಾತಿ ಗಳಿಸಿರುವಂತೆ ನಾನು ಶಿವಣ್ಣ, ಪುನೀತಣ್ಣ ಅವರ ಅಭಿಮಾನಿ ಎಂದು ಭಾಷಣ ಆರಂಭಿಸಿದರು.

digimalenadu

ಶಿವಮೊಗ್ಗ
error: Content is protected !!