ವಿಶ್ವ ಕೌಶಲ್ಯ ಸ್ಪರ್ಧೆಗೆ ಅರ್ಜಿ ಆಹ್ವಾನ

ವಿಶ್ವ ಕೌಶಲ್ಯ ಸ್ಪರ್ಧೆಗೆ ಅರ್ಜಿ ಆಹ್ವಾನ

ಶಿವಮೊಗ್ಗ | 27 ಅಕ್ಟೋಬರ್ 2022 | ಡಿಜಿ ಮಲೆನಾಡು.ಕಾಂ

ಕೌಶಲ್ಯ ಅಭಿವೃದ್ದಿ‌, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಆಯೋಜಿಸಿರುವ ವಿಶ್ವ ಕೌಶಲ್ಯ ಸ್ಪರ್ಧೆ ಹಾಗೂ ಇಂಡಿಯಾ ಸ್ಕಿಲ್ ಕಾಂಪಿಟಿಷನ್ ಕರ್ನಾಟಕದ ವಿವಿಧ ಕೌಶಲ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

17 ರಿಂದ 20 ವರ್ಷದೊಳಗಿನ ಯುವಕ ಯುವತಿಯರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಅಭ್ಯರ್ಥಿಗಳು ಕೌಶಲ್ಯ ಕರ್ನಾಟಕ ಜಾಲತಾಣದಲ್ಲಿ https://www.kaushalkar.com/app/world-skill-registration ನೋಂದಾಯಿಸಿಕೊಳ್ಳಬೇಕು. ಸ್ಕಿಲ್ ವಿಡಿಯೋವನ್ನು ಲಿಂಕ್‍ನಲ್ಲಿ ನವೆಂಬರ್ 15 ರೊಳಗೆ ಅಪ್‍ಲೋಡ್ ಮಾಡಬೇಕು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಮಾಹಿತಿಗೆ https://www.kaushalkar.com  ಅಥವಾ https://www.kaushalkar.com/world-skills-2/ ಅಥವಾ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ, ಶಾಂತಲಾ ಟವರ್ಸ್, 2ನೇ ಮಹಡಿ, 3ನೇ ಅಡ್ಡರಸ್ತೆ, ನೆಹರು ರಸ್ತೆ, ಗಾರ್ಡನ್ ಏರಿಯಾ, ಶಿವಮೊಗ್ಗ, ಮೊ.ಸಂ: 9019485688, 8197176710 ಸಂಪರ್ಕಿಸಬಹುದು ಎಂದು ಕೌಶಲ್ಯಾಭಿವೃದ್ದಿ ಅಧಿಕಾರಿ ಎಚ್.ಎಂ.ಸುರೇಶ್ ತಿಳಿಸಿದ್ದಾರೆ.

digimalenadu

ಶಿವಮೊಗ್ಗ
error: Content is protected !!