ಹೋಳಿ ಹಬ್ಬ ಆಚರಣೆ, ಶಿವಮೊಗ್ಗ ನಗರದಲ್ಲಿ ಸಂಭ್ರಮ, ಡಿಜೆ ಮ್ಯೂಸಿಕ್, ರೈನ್ ಡ್ಯಾನ್ಸ್
ಶಿವಮೊಗ್ಗ | 8 ಮಾರ್ಚ್ 2023 | ಡಿಜಿ ಮಲೆನಾಡು.ಕಾಂ
ಹಿಂದೂ ಅಲಂಕಾರ ಸಮಿತಿ ವತಿಯಿಂದ ಶಿವಮೊಗ್ಗ ನಗರದ ಗೋಪಿ ವೃತ್ತದಲ್ಲಿ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಡಿಜೆ ಮ್ಯೂಸಿಕ್, ರೈನ್ ಡ್ಯಾನ್ಸ್ ಆಯೋಜಿಸಲಾಗಿತ್ತು. ಶಿವಮೊಗ್ಗ ನಗರದ ಜನತೆ ಅತ್ಯಂತ ಸಂಭ್ರಮ ಸಡಗರದಿಂದ ಹೋಳಿ ಹಬ್ಬ ಆಚರಿಸಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್ಬುಕ್ ಪೇಜ್ ಲೈಕ್ ಮಾಡಿ: www.facebook.com/shivamogganews ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಶಿವಮೊಗ್ಗ ನಗರದಲ್ಲಿ ಹೋಳಿ ಹಬ್ಬವನ್ನು ಎಲ್ಲರೂ ಒಟ್ಟುಗೂಡಿ ಆಚರಿಸಲು ವ್ಯವಸ್ಥೆ ಮಾಡಲಾಗಿತ್ತು. ಮ್ಯೂಸಿಕ್, ರೈನ್ ಡ್ಯಾನ್ಸ್ಗೆ ಸಾವಿರಾರು ಜನರು ಭಾಗವಹಿಸಿ ಡಿಜೆ ಮ್ಯೂಸಿಕ್ಗೆ ಹೆಜ್ಜೆ ಹಾಕಿದರು. ಟ್ಯಾಂಕರ್ ಮುಖಾಂತರ ನೀರು ಸಿಂಪಡಿಸಲಾಗುತ್ತಿತ್ತು. ಸ್ಪ್ರಿಂಕ್ಲರ್ ವ್ಯವಸ್ಥೆ ಕೂಡ ಇದ್ದರಿಂದ ಹೋಳಿ ಆಚರಣೆಯಲ್ಲಿ ರೈನ್ ಡ್ಯಾನ್ಸ್ ಜತೆ ಜನರು ಕುಣಿದು ಕುಪ್ಪಳಿಸಿದರು.
ಪೊಲೀಸ್ ಭದ್ರತೆ ನಿಯೋಜಿಸುವ ಜತೆಯಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ನೃತ್ಯ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಜೈ ಭಜರಂಗ್, ಶ್ರೀರಾಮ್ ಸೇರಿದಂತೆ ಡಿಜೆ ಸಂಗೀತದ ನೃತ್ಯ ಗೀತೆಗಳಿಗೆ ಜನರು ಹೆಜ್ಜೆ ಹಾಕಿದರು. ಮಹಿಳೆಯರು, ಯುವತಿಯರು, ವಿದ್ಯಾರ್ಥಿನಿಯರು, ಮಕ್ಕಳೊಂದಿಗೆ ಕುಣಿದರು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ಆಯೋಜಿಸಿದ್ದ ಹೋಳಿ ಹಬ್ಬದ ಸಂಭ್ರಮ ಆಚರಣೆಯಲ್ಲಿ ಸಾವಿರಾರು ಜನರು ಭಾಗವಹಿಸಿ ಸಂಭ್ರಮಪಟ್ಟರು. ಗೀತೆಗಳಿಗೆ ನೃತ್ಯ ಮಾಡುವ ಜತೆಯಲ್ಲಿ ಘೋಷಣೆಗಳನ್ನು ಕೂಗಿದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/shivamogganews
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu