ಮೂತ್ರಪಿಂಡದ ಆರೋಗ್ಯ ಕುರಿತು ಜಾಗೃತಿ ಮೂಡಿಸಲು ಎನ್ ಯು ಆಸ್ಪತ್ರೆಯಿಂದ ಮ್ಯಾರಥಾನ್
ಶಿವಮೊಗ್ಗ | 11 ಮಾರ್ಚ್ 2023 | ಡಿಜಿ ಮಲೆನಾಡು.ಕಾಂ
ಮೂತ್ರಪಿಂಡದ ಆರೋಗ್ಯದ ಬಗ್ಗೆ ಎನ್‌ಯು ಆಸ್ಪತ್ರೆ ವತಿಯಿಂದ ಮೆಗಾ ಮ್ಯಾರಥಾನ್ ಮುಖಾಂತರ ಜಾಗೃತಿ ಮೂಡಿಸಲಾಯಿತು. ಎಲ್ಲರಿಗೂ ಕಿಡ್ನಿ ಆರೋಗ್ಯ ಎಂಬ ಆಶಯದೊಂದಿಗೆ ಮ್ಯಾರಥಾನ್ ನಡೆಯಿತು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/shivamogganews ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಚಿಕ್ಕ ವಯಸ್ಸಿನಲ್ಲಿಯೇ ಕಿಡ್ನಿ ಕಾಯಿಲೆಗೆ ತುತ್ತಾಗುವ ಅನೇಕ ಮಕ್ಕಳು ಸೇರಿ, ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಬಾಧಿಸುವ ಮೂತ್ರಪಿಂಡ ಕಾಯಿಲೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಮುಖ್ಯ ಎಂದು ಶಿವಮೊಗ್ಗ ಎನ್‌ಯು ಆಸ್ಪತ್ರೆಯ ಮೂತ್ರಶಾಸ್ತ್ರಜ್ಞ ಡಾ. ಪ್ರದೀಪ್ ಹೇಳಿದರು.
ಮ್ಯಾರಥಾನ್ ಭದ್ರಾವತಿಯ ಹೊಸ ಸೇತುವೆ ಬಸ್ ನಿಲ್ದಾಣ, ಸಿದ್ದಾರೂಡ ವೃತ್ತ, ರಂಗಪ್ಪ ವೃತ್ತ, ಸಿಟಿ ಕಾರ್ಪೋರೇಷನ್ ಸೇತುವೆ, ಹಾಲಪ್ಪ ವೃತ್ತ ಮತ್ತು ರೈಲ್ವೆ ಸೇತುವೆಯ ಮಾರ್ಗವಾಗಿ ನಡೆಯಿತು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ರೋಟರಿ ಕ್ಲಬ್ ಸಹಯೋಗದಲ್ಲಿ ಎನ್‌ಯು ಆಸ್ಪತ್ರೆ ಸಮೂಹ ವಿಶ್ವ ಕಿಡ್ನಿ ದಿನದ ಪ್ರಯುಕ್ತ ವಿಶಿಷ್ಟ ಮ್ಯಾರಥಾನ್ ಆಯೋಜಿಸಿತ್ತು. 350 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಡಾ. ಪ್ರವೀಣ್ ಮಲ್ವಾಡೆ, ಬಸವೇಶ್, ಯುವಕುಮಾರ್, ಆಸ್ಪತ್ರೆ ಸಿಬ್ಬಂದಿ ಮತ್ತಿತರರು ಇದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/shivamogganews
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu