ಶಿವಮೊಗ್ಗ ಜಿಲ್ಲೆಯಲ್ಲಿ ಶೇ. 79.14 ಮತದಾನ

ಶಿವಮೊಗ್ಗ ಜಿಲ್ಲೆಯಲ್ಲಿ ಶೇ. 79.14 ಮತದಾನ

ಶಿವಮೊಗ್ಗ | 11 ಮೇ 2023 | ಡಿಜಿ ಮಲೆನಾಡು.ಕಾಂ

ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಮೇ 10 ರಂದು ನಡೆದ ಮತದಾನದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಶೇ. 79.14 ಮತದಾನ ಆಗಿದೆ. ಜಿಲ್ಲೆಯ 14,72,515 ಮತದಾರರ ಪೈಕಿ 11,65,306 ಮತದಾರರು ಮತದಾನ ಮಾಡಿದ್ದಾರೆ. ಶಿವಮೊಗ್ಗ 7,28,819 ಪುರುಷ ಮತದಾರರ ಪೈಕಿ 5,85,132 ಮತದಾರರು, 7,43,664 ಮಹಿಳಾ ಮತದಾರರ ಪೈಕಿ 5,80,165 ಮತದಾರರು ಹಾಗೂ 32 ಇತರೆ ಮತದಾರರಲ್ಲಿ 5 ಜನರು ಮತದಾನ ಮಾಡಿದ್ದು, ಪುರುಷ ಶೇ. 80.28, ಮಹಿಳೆ ಶೇ. 78.01 ಮತ್ತು ಇತರೆ ಶೇ. 28.13 ಮತದಾನ ಆಗಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಶಿವಮೊಗ್ಗ ಗ್ರಾಮಾಂತರ -111 ರಲ್ಲಿ 1,05,557 ಪುರುಷ ಮತದಾರರಲ್ಲಿ 91,038 ಮತದಾರರು (ಶೇ. 86.25) ಮತ್ತು 1,06,820 ಮಹಿಳಾ ಮತದಾರರಲ್ಲಿ 88,663 ಮಹಿಳೆಯರು (ಶೇ.83) ಇತರೆ 1 ಸೇರಿ ಒಟ್ಟು 1,79,702 ಜನರು (ಶೇ.84.61) ಮತದಾನ ಮಾಡಿದ್ದಾರೆ. ಭದ್ರಾವತಿ-112 ರಲ್ಲಿ 103198 ಪುರುಷ ಮತದಾರರಲ್ಲಿ 75715 (ಶೇ.73.37) ಮತ್ತು 108962 ಮಹಿಳಾ ಮತದಾರರಲ್ಲಿ 78184 (ಶೇ.71.75) ಇತರೆ 1 ಸೇರಿ ಒಟ್ಟು 153900 ಮತದಾರರು (ಶೇ.72.54) ಮತದಾನ ಮಾಡಿದ್ದಾರೆ.

ಶಿವಮೊಗ್ಗ-113 ರಲ್ಲಿ 127441 ಪುರುಷ ಮತದಾರರಲ್ಲಿ 88883 (ಶೇ. 69.74) ಮತ್ತು 133249 ಮಹಿಳಾ ಮತದಾರರಲ್ಲಿ 89310 (ಶೇ.67.02) ಮಹಿಳೆಯರು ಇತರೆ 01 ಸೇರಿ ಒಟ್ಟು 178198 ಮತದಾರರು(ಶೇ68.35) ಮತದಾನ ಮಾಡಿದ್ದಾರೆ. ತೀರ್ಥಹಳ್ಳಿ-114 ರಲ್ಲಿ 92877 ಪುರುಷ ಮತದಾರರ ಪೈಕಿ 79766 (ಶೇ.85.88) ಮತ್ತು 93269 ಮಹಿಳಾ ಮತದಾರರಲ್ಲಿ 80443 (ಶೇ.84.44) ಮಹಿಳೆಯರು ಸೇರಿ ಒಟ್ಟು 160209(ಶೇ.85.15) ಮತದಾರರು ಮತದಾನ ಮಾಡಿದ್ದಾರೆ.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಶಿಕಾರಿಪುರ-115 ರಲ್ಲಿ 99781 ಪುರುಷ ಮತದಾರರಲ್ಲಿ 84059 (ಶೇ.84.24) ಮತ್ತು 99024 ಮಹಿಳಾ ಮತದಾರರಲ್ಲಿ 81359(ಶೇ.82.16) ಮಹಿಳೆಯರು ಸೇರಿ ಒಟ್ಟು 165418(ಶೇ.83.20) ಮತದಾರರು ಮತದಾನ ಮಾಡಿದ್ದಾರೆ. ಸೊರಬ-116 ರಲ್ಲಿ 98438 ಪುರುಷ ಮತದಾರರ ಪೈಕಿ 83040 (ಶೇ.84.36) ಮತ್ತು 96744 ಮಹಿಳಾ ಮತದಾರರಲ್ಲಿ 80156 (ಶೇ.82.85) ಮಹಿಳೆಯರು, ಇತರೆ 01 ಸೇರಿ ಒಟ್ಟು 163197 (ಶೇ.83.61) ಮತದಾರರು ಮತದಾನ ಮಾಡಿದ್ದಾರೆ.

ಸಾಗರ-117 ರಲ್ಲಿ 101527 ಪುರುಷ ಮತರಾರರ ಪೈಕಿ 82631 (ಶೇ.81.39) ಮತ್ತು 103596 ಮಹಿಳಾ ಮತದಾರರಲ್ಲಿ 82050 (ಶೇ.79.20) ಮಹಿಳೆಯರು ಇತರೆ 01 ಸೇರಿ ಒಟ್ಟು 164682 (ಶೇ.80.28) ಮತದಾರರು ಮತದಾನ ಮಾಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ -111 ರಲ್ಲಿ 247 ಮತಗಟ್ಟೆಗಳು, ಭದ್ರಾವತಿ-112 ರಲ್ಲಿ 253, ಶಿವಮೊಗ್ಗ-113 ರಲ್ಲಿ 284 ತೀರ್ಥಹಳ್ಳಿ-114 ರಲ್ಲಿ 258, ಶಿಕಾರಿಪುರ-115 ರಲ್ಲಿ 234, ಸೊರಬ-116 ರಲ್ಲಿ 239, ಸಾಗರ-117 ರಲ್ಲಿ 267 ಮತಗಟ್ಟೆ ಸೇರಿದಂತೆ ಒಟ್ಟು 1782 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

digimalenadu

ಶಿವಮೊಗ್ಗ
error: Content is protected !!