ಉದ್ಯೋಗ ಅವಕಾಶಗಳ ಸೃಷ್ಠಿಸುವ ಇಂಜಿನಿಯರಿಂಗ್‌, ಜೆ ಎನ್ ಎನ್ ಸಿ ಇ ಸಿಇಟಿ ಕಾಮೆಡ್ ಕೆ ಸಂವಾದ

ಉದ್ಯೋಗ ಅವಕಾಶಗಳ ಸೃಷ್ಠಿಸುವ ಇಂಜಿನಿಯರಿಂಗ್‌, ಜೆ ಎನ್ ಎನ್ ಸಿ ಇ   ಸಿಇಟಿ ಕಾಮೆಡ್ ಕೆ ಸಂವಾದ

ಶಿವಮೊಗ್ಗ | 9 ಜುಲೈ 2023 | ಡಿಜಿ ಮಲೆನಾಡು.ಕಾಂ

ಹೊಸತನದ ಸಂಶೋಧನೆ ಮತ್ತು ಬದಲಾವಣೆಗಳ ಮೂಲಕ ಎಲ್ಲಾ ಇಂಜಿನಿಯರಿಂಗ್ ವಿಭಾಗಗಳು ವಿಶ್ವವ್ಯಾಪ್ತಿ ಉದ್ಯೋಗ ಸೃಷ್ಟಿಸುವಲ್ಲಿ ಸಫಲವಾಗಿದೆ ಎಂದು ಜೆಎನ್ಎನ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಪಿ.ಮಂಜುನಾಥ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

Click on below Picture, Like & Follow Facebook Page, ” Digi Malenadu “

ಶಿವಮೊಗ್ಗ ನಗರದ ಜೆಎನ್ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ಸಿಇಟಿ, ಕಾಮೆಡ್ ಕೆ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಇಂಜಿನಿಯರಿಂಗ್ ಸೇರುವಾಗ ಯಾವ ಕೋರ್ಸ್ ಹೆಚ್ಚು ಪ್ಲೆಸ್ಮೆಂಟ್ ನೀಡುತ್ತದೆ ಎಂಬ ಪ್ರಶ್ನೆ ಸಹಜ. ಎಲ್ಲ ಕೋರ್ಸ್‌ಗಳು ತನ್ನದೇ ಪ್ರಾಮುಖ್ಯತೆ ಪಡೆದಿದ್ದು, ಕೋರ್ಸ್ ಅಧ್ಯಯನದಲ್ಲಿ ನಾವೆಷ್ಟು ತೊಡಗಿಸಿಕೊಂಡಿದ್ದೇವೆ ಎಂಬುದು ಮುಖ್ಯ. ಐಟಿ ಕ್ಷೇತ್ರ ಎಲ್ಲಾ ಕೋರ್ಸ್‌ಗಳ ವಿದ್ಯಾರ್ಥಿಗಳಿಗೂ ಮುಕ್ತವಾಗಿ ಅವಕಾಶ ನೀಡುತ್ತದೆ ಎಂದು ತಿಳಿಸಿದರು.

ಕಾಲೇಜುಗಳಿಗೆ ಪ್ರವೇಶಾತಿ ಪಡೆಯುವಾಗ ರಾಷ್ಟ್ರೀಯ ಮಾನ್ಯತಾ ಮಂಡಳಿ ಮತ್ತು ನ್ಯಾಕ್ ಮಾನ್ಯತೆ ಪಡೆದಿದೆಯೇ ಎಂದು ಪರಿಶೀಲಿಸಿಕೊಳ್ಳಬೇಕು. ವೆಬ್‌ ಸೈಟ್‌ ಮೂಲಕ ಬೋಧಕ ಸಿಬ್ಬಂದಿ, ಉದ್ಯೋಗವಕಾಶ ಚಟುವಟಿಕೆಗಳ ಕುರಿತು ಮಾಹಿತಿ ಪಡೆಯಬೇಕು. ಇದರಿಂದ ವಿದ್ಯಾಸಂಸ್ಥೆಗಳ ಅಧ್ಯಾಪನದ ಗುಣಮಟ್ಟ ತಿಳಿಯಲು ಸಾಧ್ಯ ಎಂದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಸರ್ಕಾರ ಮತ್ತು ಕೆಲ ಖಾಸಗಿ ಕಂಪನಿಗಳು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾರ್ಥಿ ವೇತನ ನೀಡುತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ವಿದ್ಯಾರ್ಥಿ ವೇತನಗಳು ಸರ್ಕಾರದಿಂದ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಹಣ ಸಂದಾಯವಾಗುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ನರೇಂದ್ರ, ಡಾ. ಸುರೇಂದ್ರ, ಮೋಯಿನುದ್ದಿನ್ ಖಾನ್, ಡಾ. ಸಂಜೀವ್ ಕುಂಟೆ, ಡಾ. ಎಸ್.ವಿ.ಸತ್ಯನಾರಾಯಣ, ಡಾ. ತೇಜಸ್ವಿ, ಡಾ. ಇ.ಬಸವರಾಜ್, ಡಾ. ನಿರ್ಮಲಾ, ಡಾ. ಆನಂದರಾಮ್, ಹರೀಶ್.ಎಸ್.ಬಿ, ಶಿವಾನಂದಪ್ಪ, ಮಂಜುನಾಥ ಆಚಾರ್, ಸಾಗರ್, ಅಭಿಜಿತ್, ಹೇಮಲತಾ, ಲೋಕೇಶ್, ಎನ್ಇಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ  ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

digimalenadu

ಶಿವಮೊಗ್ಗ
error: Content is protected !!