ರೋಟರಿ ಸಂಸ್ಥೆಯಿಂದ ಸೇವಾ ಚಟುವಟಿಕೆ, ಹೆಚ್ಚು ಹೆಚ್ಚು ಸದಸ್ಯರಿಂದ ಸಂಘಟನೆ ಶಕ್ತಿ ವೃದ್ಧಿ

ರೋಟರಿ ಸಂಸ್ಥೆಯಿಂದ ಸೇವಾ ಚಟುವಟಿಕೆ, ಹೆಚ್ಚು ಹೆಚ್ಚು ಸದಸ್ಯರಿಂದ ಸಂಘಟನೆ ಶಕ್ತಿ ವೃದ್ಧಿ

ಶಿವಮೊಗ್ಗ | 26 ಜುಲೈ 2023 | ಡಿಜಿ ಮಲೆನಾಡು.ಕಾಂ

ರೋಟರಿ ಸಂಸ್ಥೆಯು ಸೇವಾ ಚಟುವಟಿಕೆ ನಡೆಸುವ ಅಂತರಾಷ್ಟ್ರೀಯ ಸಂಘಟನೆಯಾಗಿದ್ದು, ಹೊಸ ಸದಸ್ಯರ ಸೇರ್ಪಡೆಯಿಂದ ಸಂಘಟನೆ ಶಕ್ತಿ ವೃದ್ಧಿಸುತ್ತದೆ. ಸಂಘ ಸಂಸ್ಥೆಗಳಿಗೆ ಹೊಸ ಸದಸ್ಯರು ಸೇರ್ಪಡೆ ಆಗುವುದರಿಂದ ಸಂಸ್ಥೆಯು ಬಲಿಷ್ಠವಾಗುತ್ತದೆ ಎಂದು ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಶಿವಮೊಗ್ಗ ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Click on below this picture, Like & Follow Facebook Page ” Digi Malenadu “

ಸಾಮಾಜಿಕ ಸೇವೆಯ ಆಶಯದಿಂದ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗೆ ಹೆಚ್ಚು ಸದಸ್ಯರು ಸೇರ್ಪಡೆಯಾದಷ್ಟು ಹೆಚ್ಚಿನ ಸೇವಾ ಕಾರ್ಯಗಳನ್ನು ನಡೆಸಲು ಸಾಧ್ಯವಿದೆ. ಹೊಸ ಆಲೋಚನೆ, ಸಲಹೆ, ಸಹಕಾರ ಹಾಗೂ ಮಾರ್ಗದರ್ಶನದಿಂದ ಸಂಸ್ಥೆಯು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿದೆ ಎಂದು ತಿಳಿಸಿದರು.

ರೋಟರಿ ಸಂಸ್ಥೆಯು ಗ್ರಾಮೀಣ ಭಾಗದಲ್ಲಿ ವಿಶೇಷವಾಗಿ ಸೇವಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಅನುಷ್ಠಾನ ಮಾಡುತ್ತಿದ್ದು, ಅಗತ್ಯವಿರುವವರಿಗೆ ಸೇವೆಯನ್ನು ತಲುಪಿಸುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಕೆಲಸಗಳನ್ನು ಮಾಡುತ್ತಿದೆ. ಆರೋಗ್ಯ ಶಿಬಿರ, ಜಾಗೃತಿ ಶಿಬಿರಗಳನ್ನು ಕೈಗೊಳ್ಳುತ್ತಿದೆ ಎಂದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಪಾಲಿಕೆ ಸದಸ್ಯೆ ರೇಖಾ ರಂಗನಾಥ್, ಡಾ. ಮಹಾದೇವಸ್ವಾಮಿ, ದಿವ್ಯಾ ಪ್ರವೀಣ್, ಡಾ. ಧನಂಜಯ, ಪ್ರಜ್ವಲ್ ಜೈನ್, ಉಮಾಮಣಿ, ಪ್ರಕಾಶ್, ಪ್ರಜ್ವಲ್ ಅವರು ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಗೆ ಸೇರ್ಪಡೆಗೊಂಡರು.

ಇದೇ ಸಂದರ್ಭದಲ್ಲಿ ಹೊಸ ಸದಸ್ಯರಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ವಸಂತ್ ಹೋಬಳಿದಾರ್, ಡಾ. ಗುಡದಪ್ಪ ಕಸಬಿ, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕಿಶೋರಕುಮಾರ್, ಕೆ.ಜಿ.ರಾಮಚಂದ್ರರಾವ್, ಚಂದ್ರಶೇಖರಯ್ಯ, ಡಾ. ಪರಮೇಶ್ವರ್, ಗಣೇಶ್, ಮಂಜುನಾಥ್ ಕದಂ, ನಾಗವೇಣಿ, ಮಂಜುನಾಥ್, ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

digimalenadu

ಶಿವಮೊಗ್ಗ
error: Content is protected !!