ಅರಾವಳಿ ಸಂಸ್ಥೆಯಿಂದ ಶಿವಮೊಗ್ಗದಲ್ಲಿ ತರಬೇತಿ ಕೇಂದ್ರ ಶೀಘ್ರದಲ್ಲೇ ಆರಂಭ

ಅರಾವಳಿ ಸಂಸ್ಥೆಯಿಂದ ಶಿವಮೊಗ್ಗದಲ್ಲಿ ತರಬೇತಿ ಕೇಂದ್ರ ಶೀಘ್ರದಲ್ಲೇ ಆರಂಭ

ಶಿವಮೊಗ್ಗ | 13 ಆಗಸ್ಟ್‌ 2023 | ಡಿಜಿ ಮಲೆನಾಡು.ಕಾಂ

ಖಚಿತ ಉದ್ಯೋಗ ಭರವಸೆ ಒದಗಿಸುವ ತರಬೇತಿ ಕೋರ್ಸ್‌ಗಳನ್ನು ಶಿವಮೊಗ್ಗದಲ್ಲಿ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಅರಾವಳಿ ಸಂಸ್ಥೆಯ ಶಿವಮೊಗ್ಗ ಕೇಂದ್ರದ ಮುಖ್ಯಸ್ಥ ಸಾವನ್‌ ರಂಗದೋಳ್‌ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ತರಬೇತಿ ಕೋರ್ಸ್‌ನಲ್ಲಿ ಪರಿಣಿತರು ತರಬೇತಿ ನೀಡಲಿದ್ದು, ಡಿಜಿಟಲ್‌ ಮಾರ್ಕೆಟಿಂಗ್‌, ಎಕ್ಸೆಲ್‌ ಪರಿಣಾಮಕಾರಿ ಬಳಕೆ, ಕಂಪ್ಯೂಟರ್‌ ಕೌಶಲ್ಯ, ಉದ್ಯೋಗ ಆಧಾರಿತ ವಿಷಯಗಳ ಬಗ್ಗೆ ತರಬೇತಿ ಕೋರ್ಸ್‌ಗಳ ಕಲಿಸಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Click on below this picture, Like & Follow Facebook Page ” Digi Malenadu “

ಅರಾವಳಿ ಬೆಂಗಳೂರು ಸಂಸ್ಥೆಯ ಫ್ರೊ. ಸಾಂದೀಪನಿ ಮಾತನಾಡಿ, ಉದ್ಯೋಗ ಹುಡುಕುತ್ತಿರುವವರಿಗೆ, ವಿವಿಧ ಕಾರಣಗಳಿಂದ ಉದ್ಯೋಗ ಬಿಟ್ಟಿರುವವರಿಗೆ, ಕಾಲೇಜು ಶಿಕ್ಷಣದಿಂದ ವಂಚಿತರಾದವರಿಗೆ, ಹೊಸದಾಗಿ ಉದ್ಯೋಗ ಹುಡುಕುತ್ತಿರುವವರಿಗೆ ತರಬೇತಿ ಕೋರ್ಸ್‌ ತುಂಬಾ ಉಪಯುಕ್ತವಾಗುತ್ತದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ವಾರಕ್ಕೆ ನಾಲ್ಕು ದಿನಗಳ ಪೂರ್ಣ ಕೋರ್ಸ್‌ಗಳ ತರಬೇತಿ ಇದೆ. ಶಿವಮೊಗ್ಗ ಕೇಂದ್ರದಲ್ಲಿ ಪ್ರತಿ ಭಾನುವಾರ ಹಾಗೂ ವಾರದ ಒಂದು ದಿನದಲ್ಲಿ ಆನ್‌ಲೈನ್‌ ತರಬೇತಿ ನೀಡುವ ಆರು ತಿಂಗಳ ಕೋರ್ಸ್‌ಗಳಿವೆ ಎಂದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : digimalenadu@gmail.com

ತರಬೇತಿ ಕೋರ್ಸ್‌ ನಂತರವು ಆರು ತಿಂಗಳ ಸೈಫಂಡ್‌ ಸಹಿತ ಪ್ರಾಯೋಗಿಕ ತರಬೇತಿ ಒದಗಿಸಲಾಗುವುದು. ಅರಾವಳಿ ಬೆಂಗಳೂರು ಸಂಸ್ಥೆಯ ಪ್ರಮುಖರಾದ ರಾಮನಾಥ್‌ ಅಯ್ಯರ್‌, ಅಮ್ಲನ್‌ ಭಟ್ಟಾಚಾರ್ಯ ಸುದ್ದಿಗೋಷ್ಠಿಯಲ್ಲಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!