ಬಿವೈಆರ್‌ ಅಭಿಮಾನಿ ಬಳಗದಿಂದ ಆಗಸ್ಟ್‌ 16ಕ್ಕೆ ”ಬಿವೈಆರ್‌ ಜನ್ಮದಿನ ಹಾಗೂ ಹರಟೆ ಕಾರ್ಯಕ್ರಮ”

ಬಿವೈಆರ್‌ ಅಭಿಮಾನಿ ಬಳಗದಿಂದ ಆಗಸ್ಟ್‌ 16ಕ್ಕೆ ”ಬಿವೈಆರ್‌ ಜನ್ಮದಿನ ಹಾಗೂ ಹರಟೆ ಕಾರ್ಯಕ್ರಮ”

ಶಿವಮೊಗ್ಗ | 14 ಆಗಸ್ಟ್‌ 2023 | ಡಿಜಿ ಮಲೆನಾಡು.ಕಾಂ

ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಜನ್ಮದಿನದ ಪ್ರಯುಕ್ತ ಶಿವಮೊಗ್ಗದ ಪಿಇಎಸ್‌ ಸಭಾಂಗಣದಲ್ಲಿ ಬಿವೈಆರ್‌ ಅಭಿಮಾನಿ ಬಳಗದಿಂದ ಆಗಸ್ಟ್‌ 16 ರಂದು ಸಂಜೆ 5.30ಕ್ಕೆ “ಬಿವೈಆರ್‌ ಜನ್ಮದಿನ ಹಾಗೂ ಹರಟೆ ಕಾರ್ಯಕ್ರಮ” ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌.ಅರುಣ್‌ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಶಿವಮೊಗ್ಗ ಜಿಲ್ಲೆಯು ಸಮಗ್ರ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಕೊಡುಗೆ ಅಪಾರ. ಕೇಂದ್ರ ಸರ್ಕಾರದಿಂದ ಸಾವಿರಾರು ಕೋಟಿ ರೂ. ಅನುದಾನವನ್ನು ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ತಂದಿದ್ದಾರೆ. ವಿಮಾನ ನಿಲ್ದಾಣ ಕಾಮಗಾರಿ ಶೀಘ್ರ ಪೂರ್ಣಗೊಳ್ಳುವಲ್ಲಿ ಬಿವೈಆರ್‌ ಪಾತ್ರ ಮಹತ್ತರ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Click on below this picture, Like & Follow Facebook Page ” Digi Malenadu “

ನೀರಾವರಿ ಕ್ಷೇತ್ರ, ರೈಲ್ವೇ ಕ್ಷೇತ್ರ, ರಸ್ತೆ ಸಂಪರ್ಕ ಕ್ಷೇತ್ರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಯೋಜನೆಗಳನ್ನು ಅನುಷ್ಠಾನ ಮಾಡಿದ್ದು, ಪ್ರತಿಯೊಂದು ಇಲಾಖೆಯ ಯೋಜನೆ, ಅನುದಾನಗಳನ್ನು ಶಿವಮೊಗ್ಗಕ್ಕೆ ತಂದಿದ್ದಾರೆ. ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಪ್ರಾಮುಖ್ಯತೆ ನೀಡಿ ಕೆಲಸ ಮಾಡಿದ್ದಾರೆ ಎಂದರು.

ಆಗಸ್ಟ್‌ 16ರ ಬೆಳಗ್ಗೆ 8ಕ್ಕೆ ಶಿವಮೊಗ್ಗ ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಬಿ.ವೈ.ರಾಘವೇಂದ್ರ ಅವರ ಜನ್ಮದಿನದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ನಡೆಸಲಾಗುವುದು. ಆಗಸ್ಟ್‌ 16ರ ಸಂಜೆ 6ರ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪಾಲ್ಗೊಳ್ಳುವರು. ಸಭಾ ಕಾರ್ಯಕ್ರಮದ ನಂತರ ಹಿರೇಮಗಳೂರು ಕಣ್ಣನ್‌ ನೇತೃತ್ವದಲ್ಲಿ ಹರಟೆ ಹಾಸ್ಯ ಕಾರ್ಯಕ್ರಮ ನಡೆಯಲಿದೆ. ಗಂಗಾವತಿ ಪ್ರಾಣೇಶ್‌, ಸುಧಾ ಬರಗೂರು, ಬಸವರಾಜು ಮಹಾಮನಿ, ನರಸಿಂಹ ಜೋಷಿ, ಲಕ್ಷ್ಮೀಶ ಹೆಗಡೆ ಸೋಂದಾ, ನಾಗಶ್ರೀ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಸೂಡಾ ಮಾಜಿ ಅಧ್ಯಕ್ಷ ಎಸ್‌.ಎಸ್‌.ಜ್ಯೋತಿಪ್ರಕಾಶ್‌, ಬಿವೈಆರ್‌ ಅಭಿಮಾನಿ ಬಳಗದ ಸಂತೋಷ್‌ ಬಳ್ಳೆಕೆರೆ, ದಿವಾಕರ್‌ ಶೆಟ್ಟಿ, ರಾಜೇಶ್‌ ಕಾಮತ್‌, ಮಾಲತೇಶ್‌, ಉಮೇಶ್‌, ಅಣ್ಣಪ್ಪ, ತೀರ್ಥೇಶ್‌, ಜಾವಿದ್‌, ಜಬಿವುಲ್ಲಾ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!