ನನ್ನ ಶಿವಮೊಗ್ಗ ಮುಂದಿನ 5 ವರ್ಷದಲ್ಲಿ ಹೇಗಿರಬೇಕು ?, ನೀವೂ ಏನೆಲ್ಲಾ ಸಲಹೆ ನೀಡಬಹುದು ?

ನನ್ನ ಶಿವಮೊಗ್ಗ ಮುಂದಿನ 5 ವರ್ಷದಲ್ಲಿ ಹೇಗಿರಬೇಕು ?, ನೀವೂ ಏನೆಲ್ಲಾ ಸಲಹೆ ನೀಡಬಹುದು ?

ಶಿವಮೊಗ್ಗ | 17 ಆಗಸ್ಟ್‌ 2023 | ಡಿಜಿ ಮಲೆನಾಡು.ಕಾಂ

ಮುಂದಿನ ಐದು ವರ್ಷಗಳಲ್ಲಿ ಶಿವಮೊಗ್ಗ ನಗರ ಹೇಗಿರಬೇಕು ಎಂಬ ಆಲೋಚನೆಯೊಂದಿಗೆ ಶಿವಮೊಗ್ಗ ನಗರದಲ್ಲಿ 15 ದಿನಗಳ ಕಾಲ ಶಿವಮೊಗ್ಗ ನಗರದ ನಾಗರೀಕರಿಂದ ಸಲಹಾ ಸಂಗ್ರಹ ಅಭಿಯಾನ ನಡೆಸುತ್ತಿದ್ದು, ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಚಾಲನೆ ನೀಡಿದರು. ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಉಪಸ್ಥಿತರಿದ್ದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಸಲಹಾ ಸಂಗ್ರಹ ಅಭಿಯಾನವು 2023ರ ಆಗಸ್ಟ್‌ 17 ರಿಂದ 31 ರವರೆಗೆ ನಡೆಯುತ್ತದೆ. ಶಿವಮೊಗ್ಗ ನಗರದ 35 ವಾರ್ಡ್ ಹಾಗೂ 50 ಪ್ರಮುಖ ಸ್ಥಳಗಳಲ್ಲಿ ಸಲಹಾ ಪೆಟ್ಟಿಗೆ ಇಡಲಾಗುತ್ತಿದೆ. ನಿಮ್ಮ ಸಲಹೆಗಳು ಶಿವಮೊಗ್ಗವನ್ನು ಸ್ಮಾರ್ಟ್ ಮಾಡುವಲ್ಲಿ ಸಹಕಾರಿಯಾಗಲಿದೆ. ಶಿವಮೊಗ್ಗದ ಸಮಸ್ಥ ನಾಗರೀಕರು ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಮನವಿ ಮಾಡಿದರು.

Click on below this picture, Like & Follow Facebook Page ” Digi Malenadu “

ಪರಿಸರ ಸುಧಾರಣೆ, ನಗರೀಕರಣ, ಪ್ರವಾಸೋದ್ಯಮ, ಕೈಗಾರಿಕೆ ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತ ಆಲೋಚನೆ ಹಾಗೂ ಕಲ್ಪನೆಗಳನ್ನು ಕಾರ್ಯರೂಪಕ್ಕೆ ತರಲು ನಾಗರೀಕರು ಸಲಹೆ ನೀಡಬಹುದು. ಸಲಹಾ ಪೆಟ್ಟಿಗೆಯ ಜೊತೆಯಲ್ಲಿ ಮಾಹಿತಿ ಕಾರ್ಡ್‌ ಇರಿಸಿದ್ದು, ಸಾರ್ವಜನಿಕರು ಸಲಹೆಯೊಂದಿಗೆ ಹೆಸರು ಮುಂತಾದ ಮಾಹಿತಿಗಳನ್ನು ಬರೆಯಬೇಕು.

ಹದಿನೈದು ದಿನಗಳಲ್ಲಿ ಸಂಗ್ರಹವಾದ ಸಲಹೆಗಳನ್ನು ಕರ್ತವ್ಯ ಭವನವು ದಾಖಲಿಸಿಕೊಳ್ಳಲಿದೆ. ಕ್ಷೇತ್ರಕ್ಕೆ ಅನುಗುಣವಾಗಿ ವಿಂಗಡಿಸಿ ಕಾರ್ಯರೂಪಕ್ಕೆ ತರಲು ಕ್ರಿಯಾ ಯೋಜನೆ ಸಿದ್ಧಪಡಿಸಿಕೊಳ್ಳಲಾಗುತ್ತದೆ. ಸಂಗ್ರಹವಾಗಿರುವ ಎಲ್ಲಾ ಸಲಹೆಗಳು ಮುಂದಿನ ಐದು ವರ್ಷಗಳಲ್ಲಿ ಶಿವಮೊಗ್ಗ ನಗರದ ಅಭಿವೃದ್ಧಿಯ ಕುರಿತು ಬೆಳಕು ಚೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಲಿದೆ.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಮಹಾನಗರ ಪಾಲಿಕೆಯ ಮೇಯರ್‌ ಶಿವಕುಮಾರ್‌,‌ ಉಪಮೇಯರ್‌ ಲಕ್ಷ್ಮೀ ಶಂಕರನಾಯ್ಕ, ಬಿಜೆಪಿ ನಗರ ಅಧ್ಯಕ್ಷ ಜಗದೀಶ್, ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಜ್ಞಾನೇಶ್ವರ್, ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!