ಶಿವಮೊಗ್ಗದಲ್ಲಿ ಡಿಜಿಟಲ್ ಮಾರುಕಟ್ಟೆ ಕಾರ್ಯಾಗಾರ ನವೆಂಬರ್ 30ಕ್ಕೆ
ಶಿವಮೊಗ್ಗ | 25 ನವೆಂಬರ್ 2023 | ಡಿಜಿ ಮಲೆನಾಡು.ಕಾಂ
ಯುನೈಟೆಡ್ ನೇಷನ್ಸ್ ಎಕನಾಮಿಕ್ ಅಂಡ್ ಸೋಶಿಯಲ್ ಕಮಿಷನ್ ಫಾರ್ ಏಷ್ಯಾ ಅಂಡ್ ದ ಪೆಸಿಫಿಕ್ ಹಾಗೂ ಉಬುಂಟು ಮಹಿಳಾ ಉದ್ಯಮಿಗಳ ಒಕ್ಕೂಟದ ಸಹಯೋಗದೊಂದಿಗೆ ಸ್ವೇದ ಮಹಿಳಾ ಉದ್ಯಮಿಗಳ ಸಂಘವು ನವೆಂಬರ್ 30ರಂದು ಶಿವಮೊಗ್ಗದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕಾರ್ಯಾಗಾರ ಹಮ್ಮಿಕೊಂಡಿದೆ.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಸೌತ್ ಈಸ್ಟ್ ಏಷ್ಯಾ ದೇಶಗಳಲ್ಲಿ ಉತ್ಪನ್ನಗಳನ್ನು ಆನ್‌ಲೈನ್ ನಲ್ಲಿ ಮಾರಾಟ ಮಾಡಲು ಕಾರ್ಯಗಾರದಲ್ಲಿ ತರಬೇತಿ ನೀಡಲಾಗುತ್ತದೆ. ಆನ್‌ಲೈನ್ ಪೋರ್ಟಲ್ ನಲ್ಲಿ ಉತ್ಪನ್ನಗಳನ್ನು ಆನ್ ಬೋರ್ಡ್ ಮಾಡಲು ಜಿ ಎಸ್ ಟಿ ನೋಂದಣಿ ಅವಶ್ಯಕತೆ ಇರುವುದಿಲ್ಲ.
Click on below this picture, Like & Follow Facebook Page ” Digi Malenadu “
ಹೊಸದಾಗಿ ಆನ್ ಲೈನ್ ಮಾರ್ಕೆಟಿಂಗ್ ಮಾಡುವವರಿಗೆ ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ಸಂಪೂರ್ಣ ಮಾಹಿತಿ ಕೊಡಲಾಗುತ್ತದೆ. ಫೇಸ್ಬುಕ್ ಇನ್ಸ್ಟಾಗ್ರಾಂ ಮುಂತಾದ ಸೋಶಿಯಲ್ ಮೀಡಿಯಾಗಳಲ್ಲಿ ಬಿಸಿನೆಸ್ ಪೇಜ್ ಓಪನ್ ಮಾಡಲು ಹಾಗೂ ಯಶಸ್ವಿಯಾಗಿ ಮಾರಾಟ ಮಾಡಲು ತಜ್ಞರಿಂದ ತರಬೇತಿ ನೀಡಲಾಗುವುದು.
ಆಸಕ್ತಿ ಉಳ್ಳವರು ಹೆಸರನ್ನು ನೋಂದಾಯಿಸಬೇಕು. ತರಬೇತಿ ಹಾಗೂ ಮಾರುಕಟ್ಟೆ ಮಾಡಲು ಜಿಎಸ್‌ಟಿ ಅವಶ್ಯಕತೆ ಇರುವುದಿಲ್ಲ. ತರಬೇತಿ ಉಚಿತವಾಗಿದೆ.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಮಹಿಳಾ ಉದ್ಯಮಿಗಳು ಹಾಗೂ ಉದ್ಯಮಿಗಳಾಗಲು ಇಚ್ಚಿಸುವ ಮಹಿಳೆಯರು ಸದುಪಯೋಗ ಪಡೆಯಬೇಕೆಂದು ಸ್ವೇದ ಮಹಿಳಾ ಉದ್ಯಮಿಗಳ ಸಂಘದ ಅಧ್ಯಕ್ಷೆ ಡಾ. ಬಿ.ವಿ.ಲಕ್ಷ್ಮೀದೇವಿ ಗೋಪಿನಾಥ್ ತಿಳಿಸಿದ್ದಾರೆ. ಹೆಸರು ನೋಂದಣಿ ಕಡ್ಡಾಯ. ನೋಂದಾಯಿಸಲು 9740760061 , 9243314217, 9449967914 ಸಂಪರ್ಕಿಸಬಹುದಾಗಿದೆ.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ : https://digimalenadu.com/about-us/