ಪ್ರವಾಸಿ ತಾಣವಾಗಿ ತುಂಗಾ ನದಿ ರಿವರ್ ಫ್ರಂಟ್ ಯೋಜನೆ, ಬಹುಮಹಡಿ ಕಾರು ನಿಲ್ದಾಣ ಕಟ್ಟಡ, ಬೈಸಿಕಲ್ ಯೋಜನೆಯು ಲೋಕಾರ್ಪಣೆ
ಶಿವಮೊಗ್ಗ | 31 ಜನವರಿ 2024 | ಡಿಜಿ ಮಲೆನಾಡು.ಕಾಂ
ತುಂಗಾ ರಿವರ್ ಫ್ರೆಂಟ್ ಯೋಜನೆಯು ಶಿವಮೊಗ್ಗ ಪ್ರವಾಸಿ ತಾಣವಾಗಿ ರೂಪುಗೊಂಡಿದ್ದು, ಶಿವಮೊಗ್ಗ ನಗರದ ತುಂಗಾ ನದಿಯ ಉತ್ತರ ದಂಡೆಯ ಮುಂಭಾಗದಲ್ಲಿ ಪಾದಾಚಾರಿ ಸೇತುವೆ, ವಾಯುವಿಹಾರದೊಂದಿಗೆ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ಯೋಜನೆಯಾಗಿ ಅನುಷ್ಠಾನಗೊಂಡಿದೆ.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಶಿವಮೊಗ್ಗ ನಗರದ ಅತ್ಯಾಕರ್ಷಕ ಪ್ರವಾಸಿ ತಾಣವನ್ನಾಗಿ ಮಾಡಬೇಕೆಂಬ ಉದ್ದೇಶದಿಂದ 10 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ಸ್ಮಾರ್ಟ್‌ಸಿಟಿ ವತಿಯಿಂದ ಯೋಜನೆ ಅನುಷ್ಠಾನಗೊಳಿಸಲಾಗಿದೆ.
Click on below this picture, Like & Follow Facebook Page ” Digi Malenadu “
ಯೋಜನೆಯಲ್ಲಿ ನದಿ ದಂಡೆಯ ಉದ್ದಕ್ಕೂ ಪಾದಾಚಾರಿ ಮಾರ್ಗ, ಸೈಕಲ್ ಪಥ, ವಿವಿಧ ಜಾತಿಯ ಮರಗಿಡಗಳು, ಉದ್ಯಾನಗಳು ಹಾಗೂ ಹೂದೋಟಗಳನ್ನು ನಿರ್ಮಿಸಲಾಗಿದೆ. ಮನೋರಂಜನೆಗೆ ಮಕ್ಕಳ ಆಟದ ತಾಣಗಳು, ಕಾರಂಜಿ, ಜಿಮ್ ಉಪಕರಣಗಳು, ಸಾಹಸಿಗರಿಗೆ ಹತ್ತುವ ಗೋಡೆಗಳು, ಕ್ರೀಡಾಸಕ್ತರಿಗೆ ವಿವಿಧ ಉದ್ದೇಶ ಕ್ರೀಡಾ ಸಂಕೀರ್ಣ, ವಿವಿಧ ಪ್ರಾಣಿ ಶಿಲ್ಪಗಳು, ಗೋಡೆಗಳ ಮೇಲೆ ಆಕರ್ಷಣೀಯ ಚಿತ್ರಮಾಲಿಕೆಗಳು, ಲತಾ ಮಂಟಪ, ನದಿ ಪಾತ್ರಕ್ಕೆ ಇಳಿಜಾರು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ.
ಬಹುಮಹಡಿ ಕಾರು ನಿಲ್ದಾಣ ಕಟ್ಟಡ : ಶಿವಮೊಗ್ಗ ನಗರದ ಶಿವಪ್ಪನಾಯಕ ಪ್ರತಿಮೆ ವೃತ್ತದಲ್ಲಿ ಮಹಾನಗರ ಪಾಲಿಕೆಗೆ ಹೊಂದಿಕೊಂಡಂತೆ 30 ಕೋಟಿ ರೂ. ವೆಚ್ಚದಲ್ಲಿ 3289 ಚ.ಮೀ ವಿಸ್ತೀರ್ಣದ ವಿಶಾಲ ಕಟ್ಟಡ ನಿರ್ಮಿಸಲಾಗಿದೆ. ಈ ಕಟ್ಟಡವು ನೆಲಮಹಡಿಯೊಂದಿಗೆ ನಾಲ್ಕು ಮಹಡಿಗಳನ್ನು ಹೊಂದಿದೆ.
ನೆಲಮಹಡಿಯಲ್ಲಿ ಒಟ್ಟು 41 ಕಾರು, 78 ಬೈಕ್ ನಿಲ್ಲಿಸಬಹುದಾಗಿದೆ. ಭೂಮಹಡಿಯಲ್ಲಿ 118 ಹೂವಿನ ಅಂಗಡಿಗಳಿಗೆ ವ್ಯವಸ್ಥೆ ಮಾಡಿದ್ದು, 1ನೇ , 2ನೇ ಮತ್ತು 3ನೇ ಮಹಡಿಗಳಲ್ಲಿ ತಲಾ 43 ಕಾರುಗಳನ್ನು ನಿಲ್ಲಿಸಬಹುದಾಗಿದೆ. ಒಟ್ಟು 172 ಕಾರು ಮತ್ತು 78 ಬೈಕುಗಳ ನಿಲುಗಡೆಗೆ ವ್ಯವಸ್ಥೆಗೊಳಿಸಲಾಗಿದೆ.
ಕಟ್ಟಡದಲ್ಲಿ ಪ್ರತ್ಯೇಕ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಇದ್ದು, ವಿದ್ಯುತ್ ವ್ಯತ್ಯಯ ಸಮಯದಲ್ಲಿ ಜನರೇಟರ್ ಮುಖೇನ ವಿದ್ಯುತ್ ಸಂಪರ್ಕ ಪಡೆಯಬಹುದು. ಮಳೆ ನೀರು ಕೊಯ್ದು ಪದ್ಧತಿ ಅಳವಡಿಸಿದೆ. ಅಗ್ನಿ ಅನಾಹುತ ಸಂದರ್ಭದಲ್ಲಿ ಸ್ವಯಂಚಾಲಿತ ಅಗ್ನಿ ಶಮನಗೊಳಿಸುವ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುತ್ತದೆ. ಪ್ರತಿ ಮಹಡಿಯಲ್ಲೂ ಶೌಚಗೃಹ ಇರಲಿದೆ. ಹಿರಿಯ ನಾಗರೀಕರಿಗೆ ಮತ್ತು ಅಂಗವಿಕಲರಿಗೆ ಲಿಫ್ಟ್ ವ್ಯವಸ್ಥೆ ಮಾಡಲಾಗಿದೆ.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಸಾರ್ವಜನಿಕ ಬೈಸಿಕಲ್ ಯೋಜನೆ : ಶಿವಮೊಗ್ಗ ಸ್ಮಾರ್ಟ್‌ಸಿಟಿಯ ಒಂದು ಪರಿಸರ ಸ್ನೇಹಿ, ಪರಿಸರ ಸಂರಕ್ಷಕ ಯೋಜನೆಯಾಗಿದ್ದು, ಸ್ಮಾರ್ಟ್‌ಸಿಟಿ ಮತ್ತು ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಯೋಜನೆಯಾಗಿದೆ. 30 ಬೈಸಿಕಲ್ ಸ್ಟೇಷನ್‌ಗಳಲ್ಲಿ 300 ಬೈಸಿಕಲ್‌ಗಳನ್ನು ಒದಗಿಸಲಾಗಿದೆ. 30 ಎಲೆಕ್ಟ್ರಾನಿಕ್ ಬೈಸಿಕಲ್‌ಗಳು ಮತ್ತು 270 ಪೆಡಲ್ ಮಾದರಿಯ ಬೈಸಿಕಲ್‌ಗಳಾಗಿವೆ. “ಯಾನ “ಅಪ್ಲಿಕೇಷನ್ ಮೂಲಕ ಬಾಡಿಗೆ, ಇತ್ಯಾದಿಗಳನ್ನು ನಿರ್ವಹಿಸಲಿದೆ.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ : https://digimalenadu.com/about-us/