ಶಿವಮೊಗ್ಗ ರವೀಂದ್ರನಗರದ ದೇವಸ್ಥಾನದಲ್ಲಿ ಫೆಬ್ರವರಿ 16 ರಿಂದ ರಾಮಸ್ಮರಣೆ

ಶಿವಮೊಗ್ಗ ರವೀಂದ್ರನಗರದ ದೇವಸ್ಥಾನದಲ್ಲಿ ಫೆಬ್ರವರಿ 16 ರಿಂದ ರಾಮಸ್ಮರಣೆ

ಶಿವಮೊಗ್ಗ | 16 ಫೆಬ್ರವರಿ 2024 | ಡಿಜಿ ಮಲೆನಾಡು.ಕಾಂ

ಕೀರ್ತಿಶೇಷ ವೇದ ಬ್ರಹ್ಮ ಅ.ಪ.ರಾಮಭಟ್ಟರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ಫೆಬ್ರವರಿ 16 ರಿಂದ ಮಾರ್ಚ್‌ 18 ರವರೆಗೆ ಒಂದು ತಿಂಗಳ ಪರ್ಯಂತ ಶಿವಮೊಗ್ಗ ರವೀಂದ್ರ ನಗರದ ಶ್ರೀ ಪ್ರಸನ್ನ ಗಣಪತಿ ಬಲಮುರಿ ದೇವಸ್ಥಾನದಲ್ಲಿ ಪ್ರತಿ ದಿನ ಸಂಜೆ 5.30 ರಿಂದ ರಾತ್ರಿ 8.30 ರವರಿಗೆ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಪೂಜ್ಯ ಅ.ಪ.ರಾಮಭಟ್ಟರ ಪುಣ್ಯ ಸ್ಮರಣೆ ಪ್ರಯುಕ್ತ ಫೆಬ್ರವರಿ 16 ರಿಂದ ಮಾರ್ಚ್‌ 18 ರವರೆಗೆ ಒಂದು ತಿಂಗಳ ಪರ್ಯಂತ ರಾಮಸ್ಮರಣೆ ಶೀರ್ಷಿಕೆ ಅಡಿಯಲ್ಲಿ ವೈವಿಧ್ಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

Click on below this picture, Like & Follow Facebook Page ” Digi Malenadu “

ಪ್ರತಿ ದಿನ ಸಂಜೆಯ ಕಾರ್ಯಕ್ರಮದಲ್ಲಿ ಪ್ರವಚನ, ಯಕ್ಷಗಾನ, ಸಂಗೀತ, ಗಮಕ, ಭರತನಾಟ್ಯ, ಗಿಟಾರ್ ಹಾಗೂ ಸ್ಯಾಕ್ರೋಫೋನ್ ವಾದನ, ಸುಗಮ ಸಂಗೀತ, ಭಾಗವತ ಸಪ್ತಾಹ, ಭಗವದ್ಗೀತೆ ಸಾರ ಉಪನ್ಯಾಸ, ಪೂಜ್ಯ ಶ್ರೀ ರಾಮ ಭಟ್ಟರ ಜೀವನ ಆಧಾರಿತ ಹರಿಕಥೆ ಪ್ರಸಂಗ, ತಾಳಮದ್ದಳೆ, ಸಾಮೂಹಿಕ ಭಜನೆ ಮತ್ತು ಲೋಕ ಕಲ್ಯಾಣಕ್ಕಾಗಿ ರುದ್ರ ಹೋಮ ವಿಶೇಷ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಫೆಬ್ರವರಿ 16 ರಿಂದ 18 ರ ಮೂರು ದಿನಗಳ ಕಾಲ ಸಂಜೆ 6.30 ರಿಂದ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಆಶ್ರಯದಲ್ಲಿ ಖ್ಯಾತ ವಿದ್ವಾಂಸ ವಿನಾಯಕ ಎಸ್ ರಾವ್ ಅವರಿಂದ ರಾಮಾಯಣದ ಪಾತ್ರಗಳ ಪರಿಚಯ ಕುರಿತು ಉಪನ್ಯಾಸ ನಡೆಯಲಿದೆ. ಫೆಬ್ರವರಿ 19 ಸೋಮವಾರ ಯಕ್ಷ ಸಂವರ್ಧನ ಸಭಾ ಶಿವಮೊಗ್ಗ ಆಶ್ರಯದಲ್ಲಿ ಚಂದ್ರಹಾಸ ಚರಿತ್ರೆ ಪ್ರಸಂಗ ಯಕ್ಷಗಾನ ನಡೆಯಲಿದೆ.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಫೆಬ್ರವರಿ 20 ಮಂಗಳವಾರ ಶ್ರೀ ಶಾರದಾ ಸಂಗೀತ ನೃತ್ಯ ವಿದ್ಯಾಲಯ ವಿದ್ವಾನ್ ಅರುಣ್ ಕುಮಾರ್ ಅವರು ಭಕ್ತಿ ಸಂಗೀತ, ದೇವರ ನಾಮ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಫೆಬ್ರವರಿ 21 ಬುಧವಾರ ಸಂಧ್ಯಾ ರಾಮನ್ ಮತ್ತು ಮಕ್ಕಳಿಂದ ಗಿಟಾರ್ ಮತ್ತು ವಯೋಲಿನ್ ಕಾರ್ಯಕ್ರಮ ನಡೆಯಲಿದೆ. ಇದೇ ರೀತಿ ಮಾರ್ಚ್‌ 18ರವರೆಗೂ ಪ್ರತಿ ದಿನ ಸಂಜೆ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!