ಸಹ್ಯಾದ್ರಿ ನಾರಾಯಣ ಆಸ್ಪತ್ರೆ ವತಿಯಿಂದ ಆಡಿಯೋಮೆಟ್ರಿ ಪರೀಕ್ಷೆಯ ಉಚಿತ ತಪಾಸಣೆ
ಶಿವಮೊಗ್ಗ | 5 ಮಾರ್ಚ್ 2024 | ಡಿಜಿ ಮಲೆನಾಡು.ಕಾಂ
ವಿಶ್ವ ಶ್ರವಣ ದಿನಾಚರಣೆ ಪ್ರಯುಕ್ತ ಸಹ್ಯಾದ್ರಿ ನಾರಾಯಣ ಆಸ್ಪತ್ರೆ ವತಿಯಿಂದ ಮಾರ್ಚ್ 4 ರಿಂದ 30ರವರೆಗೆ ಕಿವಿಯ ಸಂಪೂರ್ಣ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು, ವೈದ್ಯರ ಸಲಹೆ ಮೇರೆಗೆ ಆಡಿಯೋಮೆಟ್ರಿ ಉಚಿತ ತಪಾಸಣೆ ನಡೆಸಲಾಗುವುದು ಎಂದು ವೈದ್ಯೆ ಡಾ. ಸ್ಮಿತಾ ಟಿ.ಎಂ. ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಮಾರ್ಚ್ ತಿಂಗಳಲ್ಲಿ ನಡೆಯುವ ಶಿಬಿರದಲ್ಲಿ ಕಿವಿ ಸೋರುವಿಕೆ, ಕಿವಿಯಲ್ಲಿ ನೋವು, ಕಿವಿಯಲ್ಲಿ ಶಬ್ದ, ಕಡಿಮೆ ಕೇಳುವುದು, ತಲೆ ತಿರುಗುವುದು ಇತ್ಯಾದಿ ಕಿವಿ ಸಂಬಂಧಿತ ಸಮಸ್ಯೆಗಳಿದ್ದರೆ ತಜ್ಞ ವೈದ್ಯರು ತಪಾಸಣೆ ನಡೆಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Click on below this picture, Like & Follow Facebook Page ” Digi Malenadu “
ಪ್ರತಿ ವರ್ಷ ಮಾರ್ಚ್ 3ರಂದು ವಿಶ್ವದಾದ್ಯಂತ ಶ್ರವಣ ದಿನ ಆಚರಿಸಲಾಗುತ್ತದೆ. ಸಾರ್ವಜನಿಕರಲ್ಲಿ ಕಿವಿಯ ಬಗ್ಗೆ ಅರಿವು ಮೂಡಿಸುವುದೇ ಪ್ರಮುಖ ಉದ್ದೇಶ ಆಗಿದೆ. ವಿಶ್ವದಾದ್ಯಂತ ಶೇ. 80 ರಷ್ಟು ಕಿವಿ ತೊಂದರೆ ಇರುವವರು ಚಿಕಿತ್ಸೆ ಪಡೆಯುತ್ತಿಲ್ಲ. ಕಾರಣ ಹಿಂಜರಿಕೆ ಮತ್ತು ತಜ್ಞ ವೈದ್ಯರ ಕೊರತೆ ಎಂದರು.
1.5 ಬಿಲಿಯನ್ ಜನರು ಶ್ರವಣ ದೋಷ ಹೊಂದಿದ್ದಾರೆ. 430 ಮಿಲಿಯನ್ ಜನರು ಸಂಪೂರ್ಣ ಶ್ರವಣ ದೋಷದ ತೊಂದರೆಯಿಂದ ಬಳಲುತ್ತಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಅತಿಯಾದ ಶಬ್ದ ಮಾಲಿನ್ಯದಿಂದ ಶ್ರವಣ ದೋಷದ ತೊಂದರೆಗಳು ಹೆಚ್ಚಾಗುತ್ತಿದೆ ಎಂದು ಹೇಳಿದರು.
ಡಿಜಿಮಲೆನಾಡು.ಕಾಂ | ಇ-ಮೇಲ್ :[email protected]
ಕಿವಿ ಮತ್ತು ಅದರ ಮಹತ್ವದ ಬಗ್ಗೆ ಎಲ್ಲರಲ್ಲೂ ತಿಳುವಳಿಕೆ ಮೂಡಿಸುವುದು. ಕಿವಿಯಿಂದಾಗುವ ತೊಂದರೆಗಳು ಮತ್ತು ಅದರ ಚಿಕಿತ್ಸೆಯ ಬಗ್ಗೆ ಕುರಿತು ಅರಿವು ಮೂಡಿಸುವುದು ಶಿಬಿರ ಉದ್ದೇಶವಾಗಿದೆ ಎಂದು ತಿಳಿಸಿದರು. ವೈದ್ಯಕೀಯ ಅಧೀಕ್ಷಕ ಡಾ. ಚಕ್ರವರ್ತಿ ಸಂಡೂರು, ಆಡಿಯೋಲಜಿಸ್ಟ್ ಸಾರಂಗ್, ವ್ಯವಸ್ಥಾಪಕ ನಿರ್ದೇಶಕ ವರ್ಗೀಸ್ ಪಿ ಜಾನ್, ಶೈಲೇಶ್.ಎಸ್.ಎನ್. ಸುದ್ದಿಗೋಷ್ಠಿಯಲ್ಲಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ :www.facebook.com/digimalenadu
ಟ್ವಿಟರ್ :www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ :https://digimalenadu.com/about-us/