ಜಗತ್ತನ್ನು ಮುನ್ನಡೆಸಲಿದೆ ನಾವೀನ್ಯತೆ, ಜೆಎನ್ಎನ್ ಸಿಇ ಟೆಕ್ ಜೋನ್ 2024

ಜಗತ್ತನ್ನು ಮುನ್ನಡೆಸಲಿದೆ ನಾವೀನ್ಯತೆ, ಜೆಎನ್ಎನ್ ಸಿಇ ಟೆಕ್ ಜೋನ್ 2024

ಶಿವಮೊಗ್ಗ | 3 ಮೇ 2024 | ಡಿಜಿ ಮಲೆನಾಡು.ಕಾಂ

ನಾವೀನ್ಯತೆ ಇಡೀ ಜಗತ್ತನ್ನು ಸಮರ್ಥವಾಗಿ ಮುನ್ನಡೆಸಲಿದ್ದು, ಉಜ್ವಲ ಭವಿಷ್ಯ ನಿರ್ಮಾಣ ಮಾಡಲಿದೆ ಎಂದು ಶಾಂತಲಾ‌ ಸ್ಪೇರೊಕ್ಯಾಸ್ಟ್ ಸಂಸ್ಥೆ ಉಪಾಧ್ಯಕ್ಷ ಡಿ.ಎಸ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ನಗರದ ಜೆ.ಎನ್.ಎನ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಅಂತರ ಇಂಜಿನಿಯರಿಂಗ್ ಕಾಲೇಜುಗಳ ವಿವಿಧ ತಾಂತ್ರಿಕ ಸ್ಪರ್ಧಾ ಕಾರ್ಯಕ್ರಮ ‘ಟೆಕ್ ಜೋನ್ 2024’ ಉದ್ಘಾಟಿಸಿ ಮಾತನಾಡಿದರು.

Click on below this picture, Like & Follow Facebook Page ” Digi Malenadu “

ನಾವೀನ್ಯತೆ ಎಂಬುದು ಕಾಲೇಜು ಪದವಿಗಿಂತ ಭಿನ್ನ. ನಮ್ಮ ಆಲೋಚನೆಗಳು ಅಂತಹ ವಿಭಿನ್ನತೆ ಹೊಂದಿರಬೇಕು. ನಮ್ಮ ಸುತ್ತಲಿನ ವಾತಾವರಣದಲ್ಲಿ ನಡೆದ ನಾವೀನ್ಯಯುತ ಬದಲಾವಣೆಗಳಿಂದ ಪ್ರೇರಣೆ ಪಡೆಯಬೇಕು. ಉದ್ಯೋಗ ಪಡೆಯುವ ಹೋರಾಟಕ್ಕಿಂತ ಸ್ವಂತ ಉದ್ಯಮ ನಡೆಸುವತ್ತ ಕೇಂದ್ರಿಕರಿಸಬೇಕು ಎಂದು ಸಲಹೆ ನೀಡಿದರು.

” ಇಂದಿನ ತಲೆಮಾರಿಗೆ ವಾಸ್ತವತೆಯ ಅರಿವು ಕಡಿಮೆಯಿದೆ. ಸಮರ್ಪಣಾ ಭಾವ ಮತ್ತು ಆತ್ಮವಿಶ್ವಾಸ ನಿಮ್ಮದಾಗಬೇಕು. ನಿಮ್ಮ ಸಾಮರ್ಥ್ಯದ ಮೇಲೆ ಗಮನವಹಿಸಿ ನಿರ್ಣಯಗಳನ್ನು ತೆಗೆದುಕೊಳ್ಳಬೇಕು.” ಡಿ.ಎಸ್‌.ಚಂದ್ರಶೇಖರ್‌, ಶಾಂತಲಾ‌ ಸ್ಪೇರೊಕ್ಯಾಸ್ಟ್ ಸಂಸ್ಥೆ ಉಪಾಧ್ಯಕ್ಷ

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಹೊಸತನದ ಹುಡುಕಾಟದ ಜೊತೆಗೆ ಅಸ್ತಿತ್ವದಲ್ಲಿರುವ ವಿಷಯಗಳನ್ನು ಸುಧಾರಿಸುವುದು ಕೂಡ ನಾವೀನ್ಯತೆ. ನಮ್ಮ ಸುತ್ತಲಿನ ವಾತಾವರಣದಲ್ಲಿರುವ ವಾಸ್ತವತೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಹೇಳಿದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ :[email protected]

ಜೆ.ಎನ್.ಎನ್.ಸಿ.ಇ ಪ್ರಾಚಾರ್ಯ ಡಾ. ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಶೈಕ್ಷಣಿಕ ಡೀನ್ ಡಾ. ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ. ಎಸ್.ವಿ.ಸತ್ಯನಾರಾಯಣ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಈ.ಬಸವರಾಜ ಸೇರಿದಂತೆ ವಿದ್ಯಾರ್ಥಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ :www.facebook.com/digimalenadu

ಟ್ವಿಟರ್ :www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ :https://digimalenadu.com/about-us/

digimalenadu

ಶಿವಮೊಗ್ಗ
error: Content is protected !!