ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯ ಪ್ರಾಮುಖ್ಯತೆ, ಇಸ್ರೋ ವಿಜ್ಞಾನಿ ಚೈತ್ರಾ ರಾವ್ ಅವರ ಪ್ರೇರಣಾದಾಯಕ ಸಂದೇಶ

ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯ ಪ್ರಾಮುಖ್ಯತೆ, ಇಸ್ರೋ ವಿಜ್ಞಾನಿ ಚೈತ್ರಾ ರಾವ್ ಅವರ ಪ್ರೇರಣಾದಾಯಕ ಸಂದೇಶ

ಶಿವಮೊಗ್ಗ | 15 ಸೆಪ್ಟೆಂಬರ್‌ 2025 | ಡಿಜಿ ಮಲೆನಾಡು.ಕಾಂ

ವಿದ್ಯಾರ್ಥಿ ಜೀವನದಲ್ಲಿ ಕಲಿಯುವ ಪ್ರತಿಯೊಂದು ವಿಷಯಗಳಲ್ಲಿರುವ ವಾಸ್ತವ ಪ್ರಾಮುಖ್ಯತೆ ಅರಿತು ಕಲಿಕೆ ಮುಂದುವರೆಸಬೇಕು ಎಂದು ನಾಸಾ ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ (NISAR) ಮಿಷನ್ ಯೋಜನಾ ನಿರ್ದೇಶಕಿ ಚೈತ್ರಾ ರಾವ್ ಸಲಹೆ ನೀಡಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ :   https://whatsapp.com/channel/0029Vaf6LKjHbFV2qoWkPx0G

ನಗರದ ಜೆಎನ್‌ಎನ್‌ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಅಭಿವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪದವಿ ಹಂತದಲ್ಲಿ ಕಲಿಯುವ ವಿಷಯಗಳು ರಾಕೆಟ್ ವಿಜ್ಞಾನದಲ್ಲಿ ಬಳಸಲಾಗುತ್ತದೆ. ಯಾವುದೇ ವಿಷಯ ಕಲಿಯುವಾಗ ಅದರ ವಾಸ್ತವ ಬಳಕೆ ಅರಿತುಕೊಳ್ಳುವುದು ಮುಖ್ಯ. ಬದುಕಿನ ಹೊಸ ಜವಾಬ್ದಾರಿಗಳು ಅಂತಹ ಜ್ಞಾನದ ಅವಶ್ಯಕತೆ ಹೇಳುತ್ತದೆ ಎಂದರು.

ಕಲಿಕೆ ಎಂಬುದು ಬದುಕಿನ ನಿರಂತರ ಪ್ರಕ್ರಿಯೆ ಆಗಿರಬೇಕು. ಕಲಿಕೆ ನಿಂತಾಗ ಬದುಕಿನ ನಿಜವಾದ ಬೆಳವಣಿಗೆ ನಿಂತಂತೆ. ಸಿರಿ ಟೆಕ್ನಾಲಜಿ ಕಾಲದಲ್ಲಿ ತಂತ್ರಜ್ಞಾನದ ಕಲಿಕೆ ಕ್ಲಿಷ್ಟಕರವಾಗಿಲ್ಲ. ನಾವೀನ್ಯತೆ ಕಲಿಕೆಗೆ ಯಾವುದೇ ವಯಸ್ಸಿನ ಅಂತರವಿಲ್ಲ ಎಂದು ಹೇಳಿದರು.

ಸಿಗಂದೂರು ಸೇತುವೆಯ ಉಸ್ತುವಾರಿ ಅಧಿಕಾರಿ ಪೀರ್ ಪಾಷಾ ಮಾತನಾಡಿ, ಭವಿಷ್ಯದ ಭಾರತ ನಿರ್ಮಾಣದಲ್ಲಿ ಇಂಜಿನಿಯರ್ ಗಳ ಪಾತ್ರ ಮಹತ್ವದ್ದು. ಸರ್ ಎಂ.ವಿಶ್ವೇಶ್ವರಯ್ಯ ಅವರಂತಹ ಸೃಜನಶೀಲ ಇಂಜಿನಿಯರ್, ಮುಂದಿನ ಪೀಳಿಗೆಗೆ ಎಂದೆಂದಿಗೂ ಸ್ಪೂರ್ತಿದಾಯಕ. ರಸ್ತೆ ಸಂಪರ್ಕ ಅಭಿವೃದ್ಧಿಯಲ್ಲಿ ಅಮೆರಿಕ ದೇಶಕ್ಕೆ ಪೈಪೋಟಿ ನೀಡುವಲ್ಲಿ ಭಾರತ ಯಶಸ್ವಿಯಾಗಿದೆ ಎಂಬುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ರೈತನ ಕೈಯಿಗೆ ಅಂಟಿದ ಮಣ್ಣು, ಸೈನಿಕನ ಕೈಯಿಗೆ ಅಂಟಿದ ರಕ್ತ, ಶಿಕ್ಷಕರ ಕೈಯಿಗೆ ಅಂಟಿದ ಸೀಮೆ ಸುಣ್ಣ ದೇಶವನ್ನೆ ಬದಲಾಯಿಸುವ ಶಕ್ತಿ ಹೊಂದಿದೆ. ಓದು ಬರವಣಿಗೆ ಜೊತೆಗೆ ವಿನಯ ವಿನಮ್ರತೆ ಕಲಿಸುವುದು ನಿಜವಾದ ವಿದ್ಯಾಭ್ಯಾಸ. ಸಂಸ್ಕಾರಯುತ ಶಿಕ್ಷಣದ ಜೊತೆಗೆ ಮಾನವೀಯ ಸಂಪನ್ಮೂಲಗಳನ್ನು ಸೃಷ್ಟಿಸುವತ್ತ ವಿದ್ಯಾಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, 79 ವರ್ಷಗಳ ಎನ್ಇಎಸ್ ಸಂಸ್ಥೆ ಮಲೆನಾಡಿನ ಭಾಗದಲ್ಲಿ ಅತ್ಯಂತ ದೊಡ್ಡ ವಿದ್ಯಾಸಂಸ್ಥೆಯಾಗಿ ಬೆಳೆದು ನಿಂತಿದೆ. ಪೋಷಕರು, ವಿದ್ಯಾರ್ಥಿಗಳು ವಿದ್ಯಾಸಂಸ್ಥೆಯ ನಿಜವಾದ ಪಾಲುದಾರರು ಎಂದು ಹೇಳಿದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : digimalenadu@gmail.com

Like & Follow Facebook Page ” Digi Malenadu “

ಎನ್ಇಎಸ್ ಸಂಸ್ಥೆ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಪಿ.ಮೈಲಾರಪ್ಪ, ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಎಚ್.ಸಿ.ಶಿವಕುಮಾರ್, ಎಸ್.ಮಧುರಾವ್, ಎಂ.ಆರ್.ಸೀತಾಲಕ್ಷ್ಮೀ, ಎಂ.ಎಸ್.ಅನಂತದತ್ತ, ಜಿ.ಎನ್.ಸುಧೀರ್, ಪ್ರಾಂಶುಪಾಲ ಡಾ. ವೈ.ವಿಜಯಕುಮಾರ್, ಎಂಸಿಎ ವಿದ್ಯಾರ್ಥಿ ಅನುಶ್ರೀ, ಡಾ.ಎಚ್.ಬಿ.ಸುರೇಶ್,  ದಿವ್ಯ ಉಪಸ್ಥಿತರಿದ್ದರು.  ಇದೇ ವೇಳೆ ಕಾಲೇಜಿನ ಕೈಪಿಡಿ ಬಿಡುಗಡೆಗೊಳಿಸಲಾಯಿತು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/JqXjFMwXzil6h4ePQU7iyo

ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ  https://whatsapp.com/channel/0029Vaf6LKjHbFV2qoWkPx0G

ಫೇಸ್‌ ಬುಕ್‌ :www.facebook.com/digimalenadu

ನಮ್ಮ ಬಗ್ಗೆ :https://digimalenadu.com/about-us/

ಕೌಶಲ್ಯವಿಲ್ಲದೇ ಉದ್ಯೋಗವಿಲ್ಲ, ಬಾಷ್ ಮತ್ತು ವಾಣಿಜ್ಯ ಸಂಘದ ಸಹಯೋಗದಲ್ಲಿ ತರಬೇತಿ ಶಿಬಿರ

digimalenadu

ಶಿವಮೊಗ್ಗ
error: Content is protected !!