ಮಹಿಳಾ ಉದ್ಯಮಿಗಳ ಸಂಖ್ಯೆ ಹೆಚ್ಚಾಗಲಿ

ಮಹಿಳಾ ಉದ್ಯಮಿಗಳ ಸಂಖ್ಯೆ ಹೆಚ್ಚಾಗಲಿ

ಶಿವಮೊಗ್ಗ | 13 ಡಿಸೆಂಬರ್‌ 2025 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಿಂದ  ಸಾಧಕ ಮಹಿಳಾ ಉದ್ಯಮಿ  ಪ್ರಶಸ್ತಿ ಸ್ವೀಕರಿಸಿದ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕಿ ಡಾ. ಲಕ್ಷ್ಮೀದೇವಿ ಗೋಪಿನಾಥ್  ಮತ್ತು ಸದಸ್ಯೆ ಮಧುಮಿತ ಅವರಿಗೆ ಶಿವಮೊಗ್ಗ ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ :   https://whatsapp.com/channel/0029Vaf6LKjHbFV2qoWkPx0G

ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಮಹಿಳಾ ಉದ್ಯಮಿಗಳ ಸಂಖ್ಯೆ ಹೆಚ್ಚಾಗಬೇಕು. ಸರ್ಕಾರದ ವತಿಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕೆ ಸಂಘವು ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಲು ಬದ್ಧವಾಗಿದೆ ಎಂದು ತಿಳಿಸಿದರು.

ಲಕ್ಷ್ಮೀದೇವಿ ಗೋಪಿನಾಥ್ ಅವರಿಗೆ ಹಿಂದೆಯು ಸಹ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅನೇಕ ಮಹಿಳಾ ಉದ್ಯಮಿ ಪ್ರಶಸ್ತಿಯು ದೊರಕಿದೆ. ಮಧುಮಿತ ಅವರು ಹೋಟೆಲ್ ಉದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರ ಈ ಸಾಧನೆ ಯುವ ಮಹಿಳಾ ಉದ್ಯಮಿಗಳಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : digimalenadu@gmail.com

Like & Follow Facebook Page ” Digi Malenadu “

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಸಹ ಕಾರ್ಯದರ್ಶಿ ಕೆ.ಎಸ್.ಸುಕುಮಾರ್, ಖಜಾಂಚಿ ಆರ್.ಮನೋಹರ್, ನಿರ್ದೇಶಕರಾದ  ಡಾ. ಲಕ್ಷ್ಮೀದೇವಿ ಗೋಪಿನಾಥ್, ಬಿ.ಸುರೇಶ್ ಕುಮಾರ್, ಪ್ರದೀಪ್ ವಿ ಯೆಲಿ, ವಸಂತ್ ಹೋಬಳಿದಾರ್, ಗಣೇಶ್ ಎಂ ಅಂಗಡಿ, ಜಿ.ವಿ.ಕಿರಣ್ ಕುಮಾರ್, ರವಿಪ್ರಕಾಶ್ ಜೆನ್ನಿ, ಪಿ.ರುದ್ರೇಶ್, ಕೆ.ಬಿ.ಶಿವಕುಮಾರ್, ಕೆ.ಎನ್.ರಾಜಶೇಖರ್, ಸಿ.ಎ.ಶರತ್, ಎಸ್.ಎಸ್.ಉದಯ್ ಕುಮಾರ್, ವಿನೋದ್ ಕುಮಾರ್, ಎಸ್.ಪಿ.ಶಂಕರ್, ಮಾಜಿ ಅಧ್ಯಕ್ಷ ಎನ್.ಗೋಪಿನಾಥ್ , ಅಶ್ವಥ್ ನಾರಾಯಣ್ ಶೆಟ್ಟಿ , ಜೆ.ಆರ್.ವಾಸುದೇವ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಜಿಲ್ಲಾಧ್ಯಕ್ಷ ಆರ್.ಮೋಹನ್ ಕುಮಾರ್ , ಪದವೀಧರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್, ಬಳ್ಳೆಕೇರೆ ಸಂತೋಷ್ ಇತರರಿದ್ದರು.

ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ  https://whatsapp.com/channel/0029Vaf6LKjHbFV2qoWkPx0G

ಫೇಸ್‌ ಬುಕ್‌ :www.facebook.com/digimalenadu

ನಮ್ಮ ಬಗ್ಗೆ :https://digimalenadu.com/about-us/

ಶಿವಮೊಗ್ಗದಲ್ಲಿ ರಾಜ್ಯ ವಿಮಾ ನಿಗಮದ ಉಪ ಪ್ರಾದೇಶಿಕ ಕಚೇರಿ ತೆರೆಯಲು ಮನವಿ

digimalenadu

ಶಿವಮೊಗ್ಗ
error: Content is protected !!