ಆತ್ಮವಿಶ್ವಾಸ ವೃದ್ಧಿಸುವ ಇನ್ನರ್ ವ್ಹೀಲ್ ಸಂಸ್ಥೆ

ಆತ್ಮವಿಶ್ವಾಸ ವೃದ್ಧಿಸುವ ಇನ್ನರ್ ವ್ಹೀಲ್ ಸಂಸ್ಥೆ

ಶಿವಮೊಗ್ಗ | 15 ಡಿಸೆಂಬರ್‌ 2025 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ: ಮಹಿಳೆಯರು ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವ ಜತೆಯಲ್ಲಿ ಸಂಘಟಿತರಾಗಬೇಕು. ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ನಟಿ ಪೂಜಾ ಗಾಂಧಿ ಅಭಿಪ್ರಾಯಪಟ್ಟರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ :   https://whatsapp.com/channel/0029Vaf6LKjHbFV2qoWkPx0G

ನಗರದ ಪೆಸಿಟ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಇನ್ನರ್‌ವ್ಹೀಲ್ ಜಿಲ್ಲೆ 318ರ ವತಿಯಿಂದ ಆಯೋಜಿಸಿದ್ದ “ಶೋಭಾ–ಜಿಲ್ಲಾ ಸಮಾವೇಶ” ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಸಂಘ ಸಂಸ್ಥೆಗಳಲ್ಲಿ ಪಾಲ್ಗೊಳ್ಳುವುದರಿಂದ ಸಾಮಾಜಿಕ ಅರಿವು ಮೂಡುತ್ತದೆ ಎಂದು ತಿಳಿಸಿದರು.

ಇನ್ನರ್ ವ್ಹೀಲ್ ಸಂಸ್ಥೆ ಪ್ರಪಂಚಾದ್ಯಂತ ವಿಶೇಷ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ಹೆಚ್ಚು ಹೆಚ್ಚು ಮಹಿಳೆಯರು ಇಂತಹ ಸಂಸ್ಥೆಗಳನ್ನು ಸೇರುವುದರ ಮುಖಾಂತರ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕು. ನಮಗಾಗುವ ಸೋಲುಗಳನ್ನು ಸವಾಲಾಗಿ ತೆಗೆದುಕೊಳ್ಳಬೇಕು ಎಂದರು. ಕುವೆಂಪು ಗೀತೆ ಮತ್ತು ಮುಂಗಾರು ಮಳೆಯ ಕುಣಿದು ಕುಣಿದು ಬಾರೆ ಗೀತೆ ಹಾಡಿದರು.

ಇನ್ನರ್ ವ್ಹೀಲ್ ಜಿಲ್ಲಾ ಚೇರ್ಮನ್ ಶಬರಿ ಕಡಿದಾಳ್ ಮಾತನಾಡಿ, ಇನ್ನರ್ ವ್ಹೀಲ್ ಜಿಲ್ಲೆಯ ಎಲ್ಲ ಸದಸ್ಯರು, ಮಾಜಿ ಚೇರ್ಮನ್‌ಗಳ ಸಹಕಾರದಿಂದ ಇನ್ನರ್‌ವ್ಹೀಲ್ ಕ್ಲಬ್‌ಗಳು 1.5 ಕೋಟಿ ರೂ.ಗೂ ಹೆಚ್ಚು ಹಣವನ್ನು ಸಮುದಾಯಗಳ ಸೇವೆಗೆ ವಿನಿಯೋಗಿಸಲಾಗಿದೆ ಎಂದು ಹೇಳಿದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : digimalenadu@gmail.com

Like & Follow Facebook Page ” Digi Malenadu “

ಇನ್ನರ್‌ವ್ಹೀಲ್ ಜಿಲ್ಲಾ ಮಾಜಿ ಚೇರ್ಮನ್ ಭಾರತಿ ಚಂದ್ರಶೇಖರ್, ಸಮಾವೇಶದ ಕಾರ್ಯದರ್ಶಿ ವೀಣಾ ಹರ್ಷ, ವಾರಿಜಾ ಜಗದೀಶ್, ಶಿವಮೊಗ್ಗ ನಗರದ ಐದು ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷರಾದ ವೀಣಾ ಸುರೇಶ್, ಲತಾ ರಮೇಶ್, ಅನ್ನಪೂರ್ಣ ರಂಗನಾಥ್, ಶಾರದಾ ಬಸವರಾಜ್, ಶೀಲಾ ಸುರೇಶ್, ಜಿಲ್ಲಾ ಕಾರ್ಯದರ್ಶಿ ಉಮಾ ಮಹೇಶ್, ರಜಿನಿ ಭಟ್, ವೈಶಾಲಿ ಕುಡುವ, ದೀಪಾ ಭಂಡಾರಿ, ಸಹನ ನಾಗರಾಜ್, ಕವಿತ ನಿಯತ್, ಅನಿತಾ, ಬಿಂದು ವಿಜಯಕುಮಾರ್, ಅನುರಾಧ ಗಿರಿಮಾಜಿ, ಮಮತಾ ಸುಧೀಂದ್ರ, ರಾಜೇಶ್ವರಿ ಪ್ರತಾಪ್, ಆಶಾ ಶ್ರೀಕಾಂತ್, ವಿಜಯ ರಾಯ್ಕರ್, ಜಯಂತಿ ವಾಲಿ, ವಾಣಿ ಪ್ರವೀಣ್, ಮಧುರ ಮಹೇಶ್, ಜ್ಯೋತಿ ಸುಬ್ಬೇಗೌಡ, ವೇದ ನಾಗರಾಜ್, ಪೂರ್ಣಿಮಾ ನರೇಂದ್ರ, ಗೀತಾ ಬಸವ ಕುಮಾರ್, ಸುನಂದ ಜಗದೀಶ್, ವಿದ್ಯಾ ಮಂಜುನಾಥ್, ನಮಿತಾ ಸೂರ್ಯ ನಾರಾಯಣ್, 700ಕ್ಕೂ ಹೆಚ್ಚು ಜನ ಇನ್ನರ್‌ವ್ಹೀಲ್ ಸದಸ್ಯರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ  https://whatsapp.com/channel/0029Vaf6LKjHbFV2qoWkPx0G

ಫೇಸ್‌ ಬುಕ್‌ :www.facebook.com/digimalenadu

ನಮ್ಮ ಬಗ್ಗೆ :https://digimalenadu.com/about-us/

ಮಹಿಳಾ ಉದ್ಯಮಿಗಳ ಸಂಖ್ಯೆ ಹೆಚ್ಚಾಗಲಿ

digimalenadu

ಶಿವಮೊಗ್ಗ
error: Content is protected !!