ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಕಲಿಸಿ

ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಕಲಿಸಿ

ಶಿವಮೊಗ್ಗ | 12 ಜನವರಿ 2026 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ: ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಜತೆಯಲ್ಲಿ ಬಾಲ್ಯದಿಂದ ಒಳ್ಳೆಯ ಸಂಸ್ಕಾರ ಕಲಿಸಬೇಕು. ಪಾಲಕರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಉಪನ್ಯಾಸಕ ಡಾ. ನಾಗೇಶ್ ಬಿದಿರಗೋಡು ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ :   https://whatsapp.com/channel/0029Vaf6LKjHbFV2qoWkPx0G

ರೋಟರಿ ಕ್ಲಬ್ ಶಿವಮೊಗ್ಗ ಪೂರ್ವದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಂಪ್ರದಾಯಿಕ ಶಿಕ್ಷಣ ಪದ್ಧತಿ ಮತ್ತು ವೈಜ್ಞಾನಿಕ ಶಿಕ್ಷಣ ಪದ್ಧತಿಗೂ ಬಹಳ ವ್ಯತ್ಯಾಸ ಕಾಣುತ್ತಿದ್ದೇವೆ. ಅಂದು ತಂದೆ ತಾಯಿಯರಿಗೆ ಗೌರವ ಕೊಡುವುದರ ಜತೆ ಸಂಸ್ಕಾರ ತಿಳಿಸಿಕೊಡುತ್ತಿದ್ದರು. ಆದರೆ ತಂದೆ ತಾಯಿಯರು ಸಂಸ್ಕಾರ ಮತ್ತು ಶಿಸ್ತು ಕಲಿಸುವಲ್ಲಿ ವಿಫಲವಾಗಿದ್ದಾರೆ ಎಂದು ತಿಳಿಸಿದರು.

ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ಡಿ.ಕಿಶೋರ್‌ಕುಮಾರ್ ಮಾತನಾಡಿ, ಪ್ರತಿ ನಿತ್ಯ ಜೀವನವನ್ನು ಉತ್ತಮವಾಗಿ ಮುನ್ನಡೆಸಬೇಕು. ಅನಾವಶ್ಯಕ ಚಿಂತನೆಗಳನ್ನು ಮಾಡಬಾರದು. ಮಕ್ಕಳಿಗೆ ಹಿರಿಯರು ಅಗತ್ಯ ತಿಳವಳಿಕೆಗಳನ್ನು ಒದಗಿಸಬೇಕು ಎಂದು ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಜತೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಉಚಿತ ಆರೋಗ್ಯ ಶಿಬಿರ ಹಾಗೂ ಜಾಗೃತಿ ಶಿಬಿರಗಳನ್ನು ನಡೆಸುತ್ತಿದೆ. ಸಂಪನ್ಮೂಲ ವ್ಯಕ್ತಿಗಳ ಮುಖಾಂತರ ವೈವಿಧ್ಯ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಧನಂಜಯ ರಾಂಪುರ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಯಲ್ಲಿ ಶಿಸ್ತಿನ ಜೀವನಶೈಲಿ ರೂಪಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಉನ್ನತ ಸಾಧನೆ ಮಾಡುವಂತೆ ಪ್ರೇರಣೆ ನೀಡಬೇಕು ಎಂದು ತಿಳಿಸಿದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : digimalenadu@gmail.com

Like & Follow Facebook Page ” Digi Malenadu “

ರೋಟರಿ ಜಿಲ್ಲೆ ನಿಯೋಜಿತ ಗವರ್ನರ್ ವಸಂತ್ ಹೋಬಳಿದಾರ್, ರವಿಶಂಕರ್, ಚಂದ್ರಹಾಸ್ ರಾಯ್ಕರ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಆದಿಮೂರ್ತಿ, ಕೇಶವಪ್ಪ, ಶ್ರೀಕಾಂತ್, ಎ.ಒ.ಮಹೇಶ್, ರಮೇಶ್ ಭಟ್, ಸುವರ್ಣಾ, ಧರಣೇಂದ್ರ ದಿನಕರ್, ಡಿ ಎಸ್ ರವಿಶಂಕರ್, ರೋಟರಿ ಶಿವಮೊಗ್ಗ ಪೂರ್ವ ಸದಸ್ಯರು ಹಾಜರಿದ್ದರು.

ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ  https://whatsapp.com/channel/0029Vaf6LKjHbFV2qoWkPx0G

ಫೇಸ್‌ ಬುಕ್‌ :www.facebook.com/digimalenadu

ನಮ್ಮ ಬಗ್ಗೆ :https://digimalenadu.com/about-us/

ಆರೋಗ್ಯ ಕಾಪಾಡಿಕೊಳ್ಳಲು ಧ್ಯಾನ ಸಹಕಾರಿ

digimalenadu

ಶಿವಮೊಗ್ಗ
error: Content is protected !!