ಆಟೋರಿಕ್ಷಾ ದರ ನಿಗದಿ ಕುರಿತು ಪ್ರಾಧಿಕಾರದ ಸಭೆ ಅಕ್ಟೋಬರ್ 31ಕ್ಕೆ
ಶಿವಮೊಗ್ಗ | 22 ಅಕ್ಟೋಬರ್ 2022 | ಡಿಜಿ ಮಲೆನಾಡು.ಕಾಂ
ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ವತಿಯಿಂದ ಅಕ್ಟೋಬರ್ 31ರ ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ನೂತನ ಸಭಾಂಗಣದಲ್ಲಿ ಆಟೋರಿಕ್ಷಾಗಳ ದರ ನಿಗದಿ ಕುರಿತು ಪ್ರಾಧಿಕಾರದ ಸಭೆ ಕರೆಯಲಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರ ಉಪಸ್ಥಿತಿ ಇರಲಿದೆ.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu
ಅಕ್ಟೋಬರ್ 28ರಂದು ಬೆಳಗ್ಗೆ 11 ಕ್ಕೆ ನಿಗದಿಪಡಿಸಿದ್ದ ಶಿವಮೊಗ್ಗ ನಗರ ವ್ಯಾಪ್ತಿಗೊಳಗೆ ಆಟೋರಿಕ್ಷಾಗಳ ದರ ನಿಗದಿ ಕುರಿತು ಪ್ರಾಧಿಕಾರದ ಸಭೆಯನ್ನು ಕಾರಣಾಂತರದಿಂದ ಅಕ್ಟೋಬರ್ 31ರ ಬೆಳಗ್ಗೆ 11ಕ್ಕೆ ಮುಂದೂಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಜಿ ಮಲೆನಾಡು.ಕಾಂ | ಇ-ಮೇಲ್ : digimalenadu@gmail.com
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಸಭೆಗೆ ಆಟೋರಿಕ್ಷಾ ಮಾಲೀಕರು, ಚಾಲಕರು ಹಾಗೂ ಸಾರ್ವಜನಿಕ ಕುಂದು ಕೊರತೆ ನಿವಾರಣಾ ಸಂಸ್ಥೆ ಮತ್ತು ಇತರೆ ಸಂಘ ಸಂಸ್ಥೆ ಪ್ರತಿನಿಧಿಗಳು ಭಾಗವಹಿಸಿ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ.

