ಪ್ರತಿ ಒಂದು ಮತವೂ ಅಮೂಲ್ಯ, ಎಲ್ಲರೂ ತಪ್ಪದೇ ಮತದಾನ ಮಾಡಿ
ಶಿವಮೊಗ್ಗ | 14 ಏಪ್ರಿಲ್ 2023 | ಡಿಜಿ ಮಲೆನಾಡು.ಕಾಂ
ದೇಶವನ್ನು ಬದಲಿಸುವ ಶಕ್ತಿ ನಮ್ಮ ಮನಸ್ಸಿಗಿದ್ದು, ನಾವೆಲ್ಲ ಬದಲಾವಣೆ ತರುವಲ್ಲಿ ಆಸಕ್ತಿ ವಹಿಸಬೇಕು. ಪ್ರತಿ ಒಂದು ಮತವೂ ಅಮೂಲ್ಯವಾಗಿದ್ದು, ಎಲ್ಲ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಮನೋವೈದ್ಯೆ, ಜಿಲ್ಲಾ ಚುನಾವಣಾ ಐಕಾನ್ ಡಾ. ಶುಭ್ರತ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಜಿಲ್ಲಾ ಪಂಚಾಯಿತಿಯಲ್ಲಿ ಜಿಲ್ಲಾಡಳಿತ, ಸ್ವೀಪ್ ಮತ್ತು ಶಿವಮೊಗ್ಗ ನಗರ ಮಹಿಳಾ ಸಂಘಗಳ ಆಶ್ರಯದಲ್ಲಿ ನಗರ ಮಹಿಳೆಯರ ಸಂಘಗಳ ಪ್ರತಿನಿಧಿಗಳಿಗೆ ಚುನಾವಣಾ ಆಯೋಗದ ಕರ್ತವ್ಯಗಳು, ಹೊಣೆಗಾರಿಕೆ, ನೀತಿ ಸಂಹಿತೆ ಮುಖ್ಯಾಂಶಗಳ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ಒಂದು ಮತ ಕೂಡ ನಿರ್ಣಾಯಕ ಪಾತ್ರ ವಹಿಸುತ್ತದೆ. ಮತದಾನದ ಮಹತ್ವ ಮತ್ತು ಒಂದು ಮತಕ್ಕಿರುವ ಶಕ್ತಿಯನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು. ಒಂದು ಹೆಣ್ಣಿಗೆ ಸಾಕ್ಷರತೆ ನೀಡಿದರೆ ಇಡೀ ಕುಟುಂಬವನ್ನು ಸಾಕ್ಷರನ್ನಾಗಿ ಮಾಡುವ ಶಕ್ತಿ ಆಕೆಗಿದೆ. ಅದೇ ರೀತಿ ಒಬ್ಬ ಮಹಿಳೆಗೆ ಚುನಾವಣಾ ಅರಿವು ಮೂಡಿಸಿದಲ್ಲಿ ಇಡೀ ಕುಟುಂಬಕ್ಕೆ ಆಕೆ ಅರಿವನ್ನು ಮೂಡಿಸುತ್ತಾಳೆ ಎಂದರು.

ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಮಾತನಾಡಿ, ಮತದಾನದ ಮಹತ್ವದ ಬಗ್ಗೆ ತಿಳಿಸಿ, ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗವು ಮತದಾನ ಜಾಗೃತಿ ಸೇರಿ ಅನೇಕ ಕ್ರಮಗಳನ್ನು ಕೈಗೊಂಡಿದೆ. 80 ವರ್ಷ ಮೀರಿದವರು, ವಿಕಲಚೇತನರಿಗೆ ಪೋಸ್ಟಲ್ ಬ್ಯಾಲಟ್‍ಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : digimalenadu@gmail.com
ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್ ಎಸ್ ಲೋಖಂಡೆ ಮಾತನಾಡಿ, ಸಾರ್ವಜನಿಕರು ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಅಥವಾ ಇತರರ ಕುರಿತು ದೂರು ನೀಡುವ ಮೂಲಕ ಪಾರದರ್ಶಕ ಚುನಾವಣೆಗೆ ಸಹಕರಿಸಬಹುದು. ಆಯೋಗ ಬಿಡುಗಡೆ ಮಾಡಿರುವ ಸಿ-ವಿಜಿಲ್ ಆ್ಯಪ್‍ನ್ನು ತಮ್ಮ ಮೊಬೈಲ್‍ನಲ್ಲಿ ಡೌನ್‍ಲೋಡ್ ಮಾಡಿಕೊಂಡು ಚುನಾವಣಾ ಅಕ್ರಮಗಳ ಕುರಿತು ಛಾಯಾಚಿತ್ರ ಅಥವಾ ವಿಡಿಯೋವನ್ನು ಕಳುಹಿಸಬಹುದು. ದೂರುದಾರರ ವಿಳಾಸವನ್ನು ಗೌಪ್ಯವಾಗಿಡಲಾಗುವುದು ಎಂದು ಮಾಹಿತಿ ನೀಡಿದರು.

ಸ್ವೀಪ್ ಉಪ ನೋಡಲ್ ಅಧಿಕಾರಿ ನವೀದ್ ಪರ್ವೇಜ್ ಮಹಿಳಾ ಪ್ರತಿನಿಧಿಗಳಿಗೆ ಚುನಾವಣಾ ಆಯೋಗದ ಕರ್ತವ್ಯಗಳು, ನೀತಿ ಸಂಹಿತೆ ಮುಖ್ಯಾಂಗಳು, ಸಿವಿಜಿಲ್ ಆ್ಯಪ್, ವೋಟರ್ ಹೆಲ್ಪ್‍ಲೈನ್, ಎನ್‍ವಿಎಸ್‍ಪಿ ಪೋರ್ಟಲ್ ಬಳಕೆ ಕುರಿತು ಮಾಹಿತಿ ನೀಡಿದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
