ದೈಹಿಕ, ಮಾನಸಿಕ ಆರೋಗ್ಯದ ಬಗ್ಗೆ ಇರಲಿ ಜಾಗ್ರತೆ
ಶಿವಮೊಗ್ಗ | 3 ಫೆಬ್ರವರಿ 2026 | ಡಿಜಿ ಮಲೆನಾಡು.ಕಾಂ
ಶಿವಮೊಗ್ಗ: ವೈದ್ಯ ವೃತ್ತಿಯಲ್ಲಿ ಇರುವವರು ಸಹ ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆ ಸಮಾನವಾಗಿ ಗಮನ ಹರಿಸುವುದು ಅವಶ್ಯಕ ಎಂದು ಪದ್ಮಶ್ರೀ ಪುರಸ್ಕೃತ ಮನೋವೈದ್ಯ ಡಾ. ಸಿ.ಆರ್.ಚಂದ್ರಶೇಖರ್ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ : https://whatsapp.com/channel/0029Vaf6LKjHbFV2qoWkPx0G
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಘಟಕದ ವತಿಯಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ವಆರೋಗ್ಯ ನಿರ್ವಹಣೆ ಕುರಿತ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ವೈದ್ಯರು ಸದೃಢ ಆರೋಗ್ಯವನ್ನು ಕಾಪಾಡಿಕೊಂಡಾಗ ಮಾತ್ರ ರೋಗಿಗಳಿಗೆ ಉತ್ತಮ ಸೇವೆ ನೀಡಲು ಸಾಧ್ಯ. ಒತ್ತಡ ನಿರ್ವಹಣೆ, ಜೀವನಶೈಲಿ ಬದಲಾವಣೆಗಳು ಮತ್ತು ಸಮತೋಲನ ಜೀವನ ನಡೆಸಬೇಕು ಎಂದು ಉಪಯುಕ್ತ ಸಲಹೆಗಳನ್ನು ನೀಡಿದರು.
ವೈದ್ಯರು ಸೋಂಕು ರೋಗಗಳು, ಪೋಷಕಾಂಶ ಕೊರತೆ, ಒತ್ತಡ, ಖಿನ್ನತೆ, ಆತಂಕ, ಹೃದಯ ಹಾಗೂ ರಕ್ತನಾಳ ಸಂಬಂಧಿತ ಕಾಯಿಲೆಗಳು, ಸ್ಟ್ರೋಕ್, ಮಧುಮೇಹ, ಕ್ಯಾನ್ಸರ್, ವ್ಯಸನಗಳು ಮುಂತಾದ ಅನೇಕ ಸಮಸ್ಯೆಗಳಿಗೆ ಹೆಚ್ಚು ಒಳಗಾಗುವ ಅಪಾಯವಿದೆ ಎಂದು ಎಚ್ಚರಿಸಿದರು.
ಮಾತೃದೇವೋ ಭವ, ಪಿತೃದೇವೋ ಭವ, ಗುರುದೇವೋ ಭವ ಎಂದು ಹೇಳುವಾಗ ವೈದ್ಯೋ ನಾರಾಯಣ ಹರಿ ಎಂಬ ಉನ್ನತ ಸ್ಥಾನಮಾನ ಸಮಾಜದಲ್ಲಿ ವೈದ್ಯರಿಗೆ ಮಾತ್ರ ಇದೆ. ಪ್ರತಿಯೊಬ್ಬರೂ ಸೇವಾ ಮನೋಭಾವ ವೃದ್ಧಿಸಿಕೊಳ್ಳಬೇಕು ಎಂದು ತಿಳಿಸಿದರು.
ವೈದ್ಯಕೀಯ ವಿದ್ಯಾರ್ಥಿಗಳು ಭವಿಷ್ಯದಲ್ಲಿ ವೈದ್ಯರಾಗಿ ಎದುರಿಸಬೇಕಾದ ವೃತ್ತಿಪರ ಹಾಗೂ ವೈಯಕ್ತಿಕ ಸವಾಲುಗಳು ಮತ್ತು ಅವಕ್ಕೆ ಬೇಕಾದ ಮಾನಸಿಕ-ದೈಹಿಕ ಸಿದ್ಧತೆ ಕುರಿತು ವಿವರಿಸಿದರು.
ಡಿಜಿಮಲೆನಾಡು.ಕಾಂ | ಇ-ಮೇಲ್ : digimalenadu@gmail.com
Like & Follow Facebook Page ” Digi Malenadu “
ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಘಟಕದ ಅಧ್ಯಕ್ಷ ಡಾ. ಕೆ.ಆರ್.ರವೀಶ್, ಕಾರ್ಯದರ್ಶಿ ಡಾ. ಕೆ.ಎಸ್.ಶುಭ್ರತಾ, ಡಾ. ವಿನಾಯಕ ಜಿ, ಡಾ. ಸಿದ್ಧಲಿಂಗಪ್ಪ, ಡಾ. ಬಿ.ಎಸ್. ಸುರೇಶ್, ಡಾ. ವಿನಯಾ ಶ್ರೀನಿವಾಸ್, ಡಾ. ಕೌಸ್ತುಭ ಅರುಣ್, ಡಾ. ವಿ.ಎಲ್.ಎಸ್. ಕುಮಾರ್, ಡಾ. ಶೀಲಾ ವಿಜಯ್, ಡಾ. ವಿಜಯಾನಂದ್, ಡಾ. ಪದ್ಮೇಗೌಡ, ಶ್ರೇಯಸ್ ಸೇರಿದಂತೆ ಹಲವು ಗಣ್ಯ ವೈದ್ಯರು ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು.
ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ https://whatsapp.com/channel/0029Vaf6LKjHbFV2qoWkPx0G
ಫೇಸ್ ಬುಕ್ :www.facebook.com/digimalenadu
ನಮ್ಮ ಬಗ್ಗೆ :https://digimalenadu.com/about-us/
