ಜೆ ಎನ್ ಎನ್ ಸಿ ಇ ಐಡಿಯಾ ಲ್ಯಾಬ್ ಲೋಕಾರ್ಪಣೆ

ಜೆ ಎನ್ ಎನ್ ಸಿ ಇ ಐಡಿಯಾ ಲ್ಯಾಬ್ ಲೋಕಾರ್ಪಣೆ

ಶಿವಮೊಗ್ಗ | 2 ಮಾರ್ಚ್‌ 2026 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ: ಆವಿಷ್ಕಾರಯುತ ಕಾಲದಲ್ಲಿ ಅನುಭವಾತ್ಮಕ‌ ಕಲಿಕೆ ಮತ್ತು ನಾವೀನ್ಯ ಚಿಂತನೆಗಳ ಬಗ್ಗೆ ಸದಾ ಜಾಗೃತಿ ಅಗತ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ :   https://whatsapp.com/channel/0029Vaf6LKjHbFV2qoWkPx0G

ನಗರದ ಜೆ ಎನ್ ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನೂತನವಾಗಿ ಸ್ಥಾಪಿಸಿರುವ ಎಐಸಿಟಿಇ ಐಡಿಯಾ ಲ್ಯಾಬ್ ಮತ್ತು ಕಂಪ್ಯೂಟರ್ ಸೈನ್ಸ್ ಕಟ್ಟಡ ಉದ್ಘಾಟಿಸಿ ಮಾತನಾಡಿ, ಐಡಿಯಾ ಲ್ಯಾಬ್ ಯೋಜನೆಗಳು ಅಕಾಡೆಮಿ ಮತ್ತು ಉದ್ಯಮದ ನಡುವಿನ ಸಹಕಾರ ಉತ್ತೇಜಿಸಲಿದೆ. ವಿಜ್ಞಾನ ಮತ್ತು ಜ್ಞಾನಕ್ಕೆ ಅವಿನಾಭಾವ ಸಂಬಂಧವಿದೆ. ಉತ್ತಮ ಮಾತು ಮತ್ತು ವ್ಯಕ್ತಿತ್ವಕ್ಕೆ ಹೆಚ್ಚು ಆದ್ಯತೆ ನೀಡುವ ಜ್ಞಾನ ನಮಗೆ ಬೇಕು. ನಾವು ಕಲಿತ ಜ್ಞಾನ ಸಮಾಜಕ್ಕೆ ಅರ್ಪಣೆಯಾಗಬೇಕು ಎಂದು ತಿಳಿಸಿದರು.

ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಕಲಿಕೆ‌ ಜತೆ ವಾಸ್ತವ ಅವಶ್ಯಕತೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ತಯಾರು ಮಾಡಲು ಐಡಿಯಾ ಲ್ಯಾಬ್ ನಂತಹ ವೇದಿಕೆ ಸಹಕಾರಿ. ಸಕ್ರಿಯ ಭಾಗವಹಿಸುವಿಕೆ‌ ಮೂಲಕ ಹೊಸ ಆಧುನಿಕ ತಂತ್ರಜ್ಞಾನ, ಕೌಶಲ್ಯತೆಗೆ ಯುವ ಸಮೂಹ ತೆರೆದು ಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳ ಜತೆ ಉದ್ಯಮ ಸಂಸ್ಥೆಗಳು ಕೂಡ ಐಡಿಯಾ ಲ್ಯಾಬ್ ಉಪಯೋಗ ಪಡೆಯಬಹುದಾಗಿದೆ ಎಂದು ಹೇಳಿದರು.

ತಕ ಬುದ್ಧಿಮತ್ತೆಯನ್ನು ಬಳಸಿ ಮಾದರಿಗಳ ತರಬೇತಿ, ಪರೀಕ್ಷೆ ಮತ್ತು ಕಾರ್ಯಗತಗೊಳಿಸಲು ಬೇಕಾಗುವ ಸಂಪೂರ್ಣ ತಾಂತ್ರಿಕ ವ್ಯವಸ್ಥೆಯನ್ನು ನಿರ್ಮಾಣ ಮಾಡುವಲ್ಲಿ ವಿದ್ಯಾಸಂಸ್ಥೆಯ ಪಾತ್ರ ಪ್ರಮುಖವಾಗಿದೆ. ಎಐ ತಂತ್ರಜ್ಞಾನಕ್ಕೆ ನಮ್ಮ ಸ್ಥಳೀಯ ಭಾಷೆಗಳ ಮೂಲಕ ಮತ್ತಷ್ಟು ತರಬೇತಿ ನೀಡುವ ಕಾರ್ಯ ನಡೆಯಬೇಕು. ಇದರಿಂದ ಮೇಕ್ ಇನ್ ಇಂಡಿಯಾದಂತಹ ಪರಿಕಲ್ಪನೆಗೆ ಹೆಚ್ಚು ಬಲ ನೀಡಿದಂತಾಗುತ್ತದೆ ಎಂದು ಹೇಳಿದರು.

ಏನಿದು ಐಡಿಯಾ ಲ್ಯಾಬ್?: ಎಐಸಿಟಿಯಿ (AICTE) ಸಂಸ್ಥೆಯ ಪ್ರಮುಖ ಯೋಜನೆ ಐಡಿಯಾ ಲ್ಯಾಬ್, ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ಕ್ಕೆ ಅನುಸಾರವಾಗಿ, ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಆಧಾರಿತ ಮತ್ತು ಪ್ರಾಯೋಗಿಕ ಕಲಿಕೆಯನ್ನು ಉತ್ತೇಜಿಸುತ್ತದೆ. 4 ಕೋಟಿ ರೂ. ವೆಚ್ಚದಲ್ಲಿ, 7,500 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಜೆ ಎನ್ ಎನ್ ಸಿ ಇ ಐಡಿಯಾ ಲ್ಯಾಬ್, ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಲ್ಲಿ 24×7 ಕಾರ್ಯನಿರ್ವಹಿಸಲಿದೆ. ತ್ರಿಡಿ ಪ್ರಿಂಟರ್‌ಗಳು, ತ್ರಿಡಿ ಸ್ಕ್ಯಾನರ್‌ಗಳು, ರೋಬೋಟಿಕ್ ಪರಿಕರಗಳು, ಮರ, ಪ್ಲಾಸ್ಟಿಕ್, ಅಲ್ಯೂಮಿನಿಯಂ ಮತ್ತು ಫೋಮ್‌ನಂತಹ ವಸ್ತುಗಳನ್ನು ವಿನ್ಯಾಸಗೊಳಿಸುವ ಸಿ.ಎನ್.ಸಿ ರೌಟರ್‌ಗಳು, ಎಲೆಕ್ಟ್ರಾನಿಕ್ ಸರ್ಕ್ಯೂಟ್ ವಿನ್ಯಾಸವನ್ನು ನಿಖರವಾಗಿ ಮುದ್ರಿಸಬಲ್ಲ ಪಿಸಿಬಿ ಮುದ್ರಣ ಯಂತ್ರ ಮತ್ತು ಲೇಸರ್ ಕಟರ್‌ಗಳು, ಡ್ರೋನ್ ಯುನಿಟ್, ಐಓಟಿ ಪರಿಕರಗಳು, ಅಮ್ಯೆಚುರ್ ರೇಡಿಯೋ ಅಪರೇಟರ್ಸ್ ಸೇರಿದಂತೆ ಉದ್ಯಮ ಮಟ್ಟದ 200 ಕ್ಕೂ ಹೆಚ್ಚು ಆಧುನಿಕ ಉಪಕರಣಗಳು ಹಾಗೂ ಪ್ರಾತ್ಯಕ್ಷಿಕೆ ಸೌಲಭ್ಯಗಳನ್ನು ಹೊಂದಿದೆ. ಒಂದೇ ಸೂರಿನಡಿ, ಸ್ಮಾರ್ಟ್ ಉತ್ಪಾದನೆ, ಡಿಜಿಟಲ್ ಇಂಜಿನಿಯರಿಂಗ್, ಎಐ ಚಾಲಿತ ಇಂಜಿನಿಯರಿಂಗ್ ಸೇರಿದಂತೆ ವಿವಿಧ‌ ಕ್ಷೇತ್ರಗಳ ಆವಿಷ್ಕಾರಿ‌ ಯೋಚನೆಗಳು, ಕಾರ್ಯಗತಗೊಳಿಸುವ ಯೋಜನೆಗಳಾಗಿ ರೂಪಗೊಳ್ಳಲಿದೆ.

ಡಿಜಿಮಲೆನಾಡು.ಕಾಂ | ಇ-ಮೇಲ್‌ : digimalenadu@gmail.com

Like & Follow Facebook Page ” Digi Malenadu “

ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕ ಎಂ.ಎಸ್.ಅನಂತದತ್ತಾ, ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಎಚ್.ಸಿ.ಶಿವಕುಮಾರ್, ಜಿ.ಎನ್.ಸುಧೀರ್, ಎಂ.ಆರ್.ಸೀತಾಲಕ್ಷ್ಮೀ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಕಾಲೇಜಿನ ಪ್ರಾಂಶುಪಾಲ ಡಾ. ವೈ.ವಿಜಯಕುಮಾರ್, ಸಂಶೋಧನಾ ಡೀನ್ ಡಾ. ಎಸ್.ವಿ.ಸತ್ಯನಾರಾಯಣ, ಐಡಿಯಾ ಲ್ಯಾಬ್ ಸಂಯೋಜಕ ಡಾ. ಎಂ.ಎಚ್.ಮೊಯಿನುದ್ದೀನ್ ಖಾನ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಜಲೇಶ್ ಕುಮಾರ್ ಉಪಸ್ಥಿತರಿದ್ದರು.

ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ  https://whatsapp.com/channel/0029Vaf6LKjHbFV2qoWkPx0G

ಫೇಸ್‌ ಬುಕ್‌ :www.facebook.com/digimalenadu

ನಮ್ಮ ಬಗ್ಗೆ :https://digimalenadu.com/about-us/

ಜೆಎನ್ಎನ್ ಕಾಲೇಜಿನ ಎಂಬಿಎ ವಿಭಾಗದಿಂದ ಉದ್ಯೋಗ ಮೇಳ, 80 ವಿದ್ಯಾರ್ಥಿಗಳಿಗೆ ಉದ್ಯೋಗ

digimalenadu

ಶಿವಮೊಗ್ಗ
error: Content is protected !!