ಎನ್ ಇ ಎಸ್ ಉದ್ಯೋಗ ಮೇಳ, ನೇಮಕಾತಿ ಪತ್ರ ಪಡೆದ 418 ವಿದ್ಯಾರ್ಥಿಗಳು

ಎನ್ ಇ ಎಸ್ ಉದ್ಯೋಗ ಮೇಳ, ನೇಮಕಾತಿ ಪತ್ರ ಪಡೆದ 418 ವಿದ್ಯಾರ್ಥಿಗಳು

ಶಿವಮೊಗ್ಗ | 2 ಮಾರ್ಚ್‌ 2026 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ: ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯಿಂದ ಜೆ ಎನ್ ಎನ್ ಇಂಜಿನಿಯರಿಂಗ್‌ ಕಾಲೇಜಿನ ಆವರಣದಲ್ಲಿ, ವಿವಿಧ ವಿದ್ಯಾಸಂಸ್ಥೆಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಶನಿವಾರ ಏರ್ಪಡಿಸಿದ್ದ ‘ಎನ್ ಇ ಎಸ್ ಉದ್ಯೋಗ ಮೇಳ’ದಲ್ಲಿ 418  ವಿದ್ಯಾರ್ಥಿಗಳು ನೇಮಕಾತಿ ಪತ್ರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ :   https://whatsapp.com/channel/0029Vaf6LKjHbFV2qoWkPx0G

ಟಾಟಾ ಎಲೆಕ್ಟ್ರಿಕಲ್, ವೆಕ್ಸಿಲಾನ್ ಟೆಕ್ನಾಲಜಿಸ್, ಗ್ರೀಟ್ ಟೆಕ್ನಾಲಜೀಸ್, ಹ್ಯುಂಡೈ, ಆ್ಯಕ್ಸಿಸ್ ಬ್ಯಾಂಕ್, ಶ್ರೀರಾಮ್ ಫೈನಾನ್ಸ್, ಲೆನ್ಸ್ ಕಾರ್ಟ್ ಸೇರಿದಂತೆ 31 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದ ಉದ್ಯೋಗ ಮೇಳದಲ್ಲಿ, ಎನ್ಇಎಸ್ ಸಂಸ್ಥೆಯ ವಿವಿಧ ಪದವಿ ಕಾಲೇಜುಗಳ ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಸ್ಸಿ ಪದವಿಗಳ 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಆತ್ಮವಿಶ್ವಾಸ ಎಂಬುದು ಬದುಕಿನ ಪ್ರತಿ ಹಂತದ ಅದ್ಭುತ ಶಕ್ತಿಯಾಗಿದ್ದು, ಸಂದರ್ಶನವನ್ನು  ಜ್ಞಾನದ ಜತೆಗೆ ವಿಶ್ವಾಸದಿಂದ ಎದುರಿಸಬೇಕು ಎಂದು ಹೇಳಿದರು.

ಎನ್ಇಎಸ್ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್ ಮಾತನಾಡಿ, ಉದ್ಯೋಗ ಪಡೆಯುವ ತಯಾರಿಯ ಜತೆಗೆ ದೀರ್ಘಕಾಲಿಕ ವೃತ್ತಿ ಜೀವನ ನಿರ್ಮಾಣದತ್ತ ಕೇಂದ್ರಿಕರಿಸಬೇಕು.  ಆವಿಷ್ಕಾರಿ ಬದಲಾವಣೆಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬೇಕಿದೆ ಎಂದು ಹೇಳಿದರು.

ಡಿಜಿಮಲೆನಾಡು.ಕಾಂ | ಇ-ಮೇಲ್‌ : digimalenadu@gmail.com

Like & Follow Facebook Page ” Digi Malenadu “

ಜೆಎನ್‌ಎನ್‌ಸಿಇ ಕಾಲೇಜಿನ ಪ್ರಾಂಶುಪಾಲ ಡಾ. ವೈ. ವಿಜಯಕುಮಾರ್, ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ಪ್ರಾಂಶುಪಾಲ ಡಾ. ಶಿವಪ್ರಸಾದ್, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ವಿಶೇಷಾಧಿಕಾರಿ ಡಾ. ಆರ್.ಎಂ.ಜಗದೀಶ್, ಎಸ್.ಆರ್.ನಾಗಪ್ಪಶೆಟ್ಟಿ ಅನ್ವಯಿಕ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಎಲ್.ಅರವಿಂದ, ಕಮಲಾ ನೆಹರು ಕಾಲೇಜಿನ ಪ್ರಾಂಶುಪಾಲೆ ಪ್ರೊ. ಮಮತಾ, ಶರಾವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಆರ್‌.ಡಿ ಮಲ್ಲಯ್ಯ, ತರಬೇತಿ ಮತ್ತು ನಿಯೋಜನೆ ಕೇಂದ್ರ ನಿರ್ದೇಶಕ ತೇಜಸ್ವಿ ಕಟ್ಟಿಮನಿ, ಪ್ಲೇಸ್ಮೆಂಟ್ ಅಧಿಕಾರಿ ಬಿ.ಸುರೇಶ್, ಸಂಯೋಜಕ ಶರತ್ ಉಪಸ್ಥಿತರಿದ್ದರು.

ಡಿಜಿ ಮಲೆನಾಡು ವಾಟ್ಸಪ್ ಚಾನಲ್‌ ಜಾಯಿನ್‌ ಆಗಿರಿ  https://whatsapp.com/channel/0029Vaf6LKjHbFV2qoWkPx0G

ಫೇಸ್‌ ಬುಕ್‌ :www.facebook.com/digimalenadu

ನಮ್ಮ ಬಗ್ಗೆ :https://digimalenadu.com/about-us/

ಜೆ ಎನ್ ಎನ್ ಸಿ ಇ ಐಡಿಯಾ ಲ್ಯಾಬ್ ಲೋಕಾರ್ಪಣೆ

digimalenadu

ಶಿವಮೊಗ್ಗ
error: Content is protected !!