ವಾಸ್ತವತೆಯ ವಿಮರ್ಶಿಸುವ ಕುತೂಹಲ ಬೆಳೆಸಿಕೊಳ್ಳಿ, ಜೆ ಎನ್ ಎನ್ ಸಿ ಇ ಉತ್ಥಾನ, ದಶಮಾನೋತ್ಸವ ಸಂಭ್ರಮ
ಶಿವಮೊಗ್ಗ | 3 ಏಪ್ರಿಲ್ 2026 | ಡಿಜಿ ಮಲೆನಾಡು.ಕಾಂ
ಶಿವಮೊಗ್ಗ: ಸುತ್ತಲಿನ ವಾತಾವರಣದ ವಾಸ್ತವತೆಯನ್ನು ವಿಮರ್ಶಿಸುವಂತಹ ಕುತೂಹಲ ಬೆಳೆಸಿಕೊಳ್ಳಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu
ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಬಿಎ ವಿಭಾಗದಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಮತ್ತು ನಿರ್ವಹಣಾ ಕ್ಷೇತ್ರದ ‘ಉತ್ಥಾನ-2026’ ದಶಮಾನೋತ್ಸವ ಸಂಭ್ರಮ ಉದ್ಘಾಟಿಸಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ವಿಷಯಗಳ ಬಗ್ಗೆ ಕುತೂಹಲ ಬೆಳೆಸಿಕೊಳ್ಳುವ ಅನಿವಾರ್ಯತೆ ಇದೆ. ಯುವ ಸಮೂಹ ಮುಂದಿನ ಜನಾಂಗದ ರಾಯಭಾರಿಗಳು. ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಸಂಸ್ಕೃತಿ ಸಂಸ್ಕಾರವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ಇಂದಿನ ಯುವ ಸಮೂಹದ ಮೇಲಿದೆ ಎಂದು ತಿಳಿಸಿದರು.
ನಮ್ಮ ಸಂಸ್ಕೃತಿಯನ್ನು ಎಂದಿಗೂ ಮರೆಯದಿರಿ. ನಾವು ಮರೆತಿದ್ದ ಸೌದೆ ಒಲೆಗಳು ಮತ್ತೆ ಮುನ್ನಲೆಗೆ ಬಂದಿದೆ. ಹಾಗಾಗಿ ಯಾವ ವಿಚಾರಗಳ ಬಗ್ಗೆಯು ತಾತ್ಸಾರ ಬೇಡ. ವ್ಯಕ್ತಿಯ ದುರ್ಬಲ ಮನಸ್ಥಿತಿ, ಆತನನ್ನೆ ಹಾಳು ಮಾಡುತ್ತದೆ. ಓದುವುದು, ಬರೆಯುವುದನ್ನು ಕಲಿಸುವುದು ವಿದ್ಯಾಭ್ಯಾಸವಲ್ಲ. ಅದರೊಂದಿಗೆ ವಿನಯ ವಿವೇಕ ಕಲಿಸುವುದೆ ನಿಜವಾದ ವಿದ್ಯಾಭ್ಯಾಸ ಎಂದು ಹೇಳಿದರು.
ದೃಷ್ಟಿ ಸರಿಯಿದ್ದಾಗ ಮಾತ್ರ, ಸೃಷ್ಟಿ ಸರಿಯಿರುತ್ತದೆ. ವಾದದ ಮಾತಿಗಿಂತ, ಸ್ವಾದದ ಮೌನವೇ ಲೇಸು. ಸಂಸ್ಕಾರ ತುಂಬಿದ ಮಾತುಗಳು ನಿಮ್ಮದಾಗಲಿ. ಸಧೃಡತೆಯ ಮನಸ್ಸಿನ ಬೆಳವಣಿಗೆಗೆ ಇಂತಹ ವೇದಿಕೆಗಳನ್ನು ಪೂರಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಡಿಜಿಮಲೆನಾಡು.ಕಾಂ | ಇ-ಮೇಲ್ : digimalenadu@gmail.com
Like & Follow Facebook Page ” Digi Malenadu “
ಕಾಲೇಜಿನ ಪ್ರಾಂಶುಪಾಲ ಡಾ. ವೈ.ವಿಜಯಕುಮಾರ್, ಎನ್ಇಎಸ್ ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಎಚ್.ಸಿ.ಶಿವಕುಮಾರ್, ಸಂಶೋಧನಾ ಡೀನ್ ಡಾ. ಎಸ್.ವಿ.ಸತ್ಯನಾರಾಯಣ, ಎಂಬಿಎ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತ್, ಕಾರ್ಯಕ್ರಮ ಸಂಯೋಜಕರಾದ ಡಾ.ಸಂತೋಷ್ ಶಾನಭಾಗ್, ಡಾ.ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬ್ಯುಸಿನೆಸ್ ಪ್ಲಾನ್, ಬೆಸ್ಟ್ ಮ್ಯಾನೇಜರ್, ಬ್ಯುಸಿನೆಸ್ ಕ್ವಿಜ್, ಸ್ಟಾಕ್ ಮಾರ್ಕೆಟ್, ಚಿತ್ರಕಲೆ, ಸಮೂಹ ನೃತ್ಯ, ಬೆಂಕಿ ರಹಿತ ಅಡುಗೆ, ಪ್ರೇಮಗೀತೆಗಳ ಗಾಯನ, ವಾಲಿಬಾಲ್, ಥ್ರೋಬಾಲ್, ಚೆಸ್, ಇ-ಸ್ಪೋರ್ಟ್ಸ್ ಸೇರಿದಂತೆ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ 15 ಪದವಿ ಕಾಲೇಜುಗಳ 750ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಉಪನ್ಯಾಸಕರಾದ ಡಾ. ಸುಭದ್ರ.ಪಿ.ಎಸ್, ಡಾ.ವಿ.ವಿಕ್ರಮ್ ಹಾಜರಿದ್ದರು.
ಫೇಸ್ ಬುಕ್ :www.facebook.com/digimalenadu
ನಮ್ಮ ಬಗ್ಗೆ :https://digimalenadu.com/about-us/
ನಿಮ್ಮ ವಾಹನದ ಮೇಲೆ ಎಷ್ಟು ದಂಡ ಇದೆ ಚೆಕ್ ಮಾಡಿಕೊಳ್ಳಿ . . . ಇನ್ಮುಂದೆ ಪೊಲೀಸರು ಕಂಡಂತೆ . . . Fine
