ಕೆ.ಎ.ದಯಾನಂದ ವಾಚನಾಲಯದ ತರಬೇತಿ ವಿದ್ಯಾರ್ಥಿಗೆ ಸಿಐಎಸ್ಎಫ್ ಹುದ್ದೆ
ಶಿವಮೊಗ್ಗ | 7 ಫೆಬ್ರವರಿ 2026 | ಡಿಜಿ ಮಲೆನಾಡು.ಕಾಂ
ಶಿವಮೊಗ್ಗ: ಸಮನ್ವಯ ಟ್ರಸ್ಟ್ ನ ಕೆ.ಎ.ದಯಾನಂದ ಐಎಎಸ್ ವಾಚನಾಲಯದಲ್ಲಿ ಅಧ್ಯಯನ ನಡೆಸುತ್ತಿದ್ದ ಸೊರಬ ತಾಲೂಕಿನ ಹಲಸಿನಕೊಪ್ಪ ಗ್ರಾಮದ ರಾಜಶೇಖರ ಅವರು ಕೇಂದ್ರ ಸರ್ಕಾರದ ಗೃಹ ಇಲಾಖೆಯ ಸಿಐಎಸ್‌ಎಫ್ ( ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ ) ಜನರಲ್ ಡ್ಯೂಟಿ ಹುದ್ದೆಗೆ ನೇಮಕಗೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ : https://whatsapp.com/channel/0029Vaf6LKjHbFV2qoWkPx0G
ಕೆ.ಎ.ದಯಾನಂದ್ ಐಎಎಸ್ ಹೆಸರಿನಲ್ಲಿ ಸಮನ್ವಯ ಟ್ರಸ್ಟ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಎರಡು ವರ್ಷದಿಂದ ಉಚಿತ ವಾಚನಾಲಯ ನಡೆಸುತ್ತಿದ್ದು, ಈವರೆಗೂ 7 ಆಕಾಂಕ್ಷಿಗಳು ಕೇಂದ್ರ ಮತ್ತು ಸರ್ಕಾರದ ಹುದ್ದೆಗೆ ನೇಮಕಗೊಂಡಿದ್ದಾರೆ.
ಸೊರಬ ತಾಲೂಕಿನ ಹಲಸಿನಕೊಪ್ಪ ಗ್ರಾಮದ ಸುರೇಶ್ ಅವರ ಪುತ್ರ ರಾಜಶೇಖರ ಅವರು ಕೆ.ಎ. ದಯಾನಂದ ಉಚಿತ ವಾಚನಾಲಯದಲ್ಲಿ ಅಧ್ಯಯನ ನಡೆಸುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದರು. ಸಾವಿರಾರು ಪುಸ್ತಕಗಳು ಉಚಿತ ವಾಚನಾಲಯದಲ್ಲಿ ಲಭ್ಯವಿದ್ದು, ಡಿಜಿಟಲ್ ಲೈಬ್ರರಿ ಸೌಲಭ್ಯ ಸಹ ಇದೆ.
ಡಿಜಿಮಲೆನಾಡು.ಕಾಂ | ಇ-ಮೇಲ್ : digimalenadu@gmail.com
Like & Follow Facebook Page ” Digi Malenadu “
ಸಿಐಎಸ್‌ಎಫ್ ( ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ ) ಜನರಲ್ ಡ್ಯೂಟಿ ಹುದ್ದೆಗೆ ಆಯ್ಕೆಯಾಗಿರುವ ರಾಜಶೇಖರ ಅವರಿಗೆ ಸಮನ್ವಯ ಟ್ರಸ್ಟ್ ನ ಕೆ.ಎ.ದಯಾನಂದ ಐಎಎಸ್ ವಾಚನಾಲಯದ ಪರವಾಗಿ ಅಭಿನಂದಿಸಲಾಯಿತು. ಸಮನ್ವಯ ಟ್ರಸ್ಟ್ ಅಧ್ಯಕ್ಷೆ ಗಿರಿಜಾದೇವಿ, ಆಡಳಿತಾಧಿಕಾರಿ ಯತೀಶ್, ಸಮನ್ವಯ ಕಾಶಿ, ತರಬೇತಿ ಕೇಂದ್ರದ ವಿದ್ಯಾರ್ಥಿಗಳು ರಾಜಶೇಖರ ಅವರಿಗೆ ಶುಭಕೋರಿದರು.
ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ https://whatsapp.com/channel/0029Vaf6LKjHbFV2qoWkPx0G
ಫೇಸ್ ಬುಕ್ :www.facebook.com/digimalenadu
ನಮ್ಮ ಬಗ್ಗೆ :https://digimalenadu.com/about-us/
